ಕರ್ನಾಟಕ

karnataka

ಮಾನವ-ಪ್ರಾಣಿ ಸಂಘರ್ಷ: ಕೇರಳದಲ್ಲಿ ಸಾವಿನ ಸಂಖ್ಯೆ ಗಮನಾರ್ಹ ಇಳಿಕೆ- ಅರಣ್ಯ ಇಲಾಖೆ ಮಾಹಿತಿ

By PTI

Published : Feb 25, 2024, 7:31 PM IST

ಕೇರಳದಲ್ಲಿ ಕಾಡು ಪ್ರಾಣಿಗಳ ದಾಳಿಯ ವಿರುದ್ಧ ಪ್ರತಿಭಟನೆಗಳು ಹೆಚ್ಚುತ್ತಿರುವ ನಡುವೆ ರಾಜ್ಯ ಅರಣ್ಯ ಇಲಾಖೆಯ ಇತ್ತೀಚಿನ ಹೇಳಿಕೆಯು ಮಾನವರ ಸಾವುಗಳು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತೋರಿಸುತ್ತದೆ.

Human animal conflict  fatalities in Kerala  ಮಾನವ ಪ್ರಾಣಿ ಸಂಘರ್ಷ  ಕಾಡು ಪ್ರಾಣಿಗಳ ದಾಳಿ  ರಾಜ್ಯ ಅರಣ್ಯ ಇಲಾಖೆ
ಕೇರಳದಲ್ಲಿ ಮಾನವ ಸಾವುಗಳಲ್ಲಿ ಗಮನಾರ್ಹ ಇಳಿಕೆ

ತಿರುವನಂತಪುರಂ (ಕೇರಳ):ಜೀವ ಮತ್ತು ಆಸ್ತಿಪಾಸ್ತಿಗೆ ಬೆದರಿಕೆಯೊಡ್ಡುವ ಕಾಡುಪ್ರಾಣಿಗಳ ದಾಳಿಯ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ. ಇದರ ನಡುವೆಯೂ ರಾಜ್ಯ ಅರಣ್ಯ ಇಲಾಖೆಯ ಇತ್ತೀಚಿನ ಮಾಹಿತಿಯು ಎಲ್ಲರಿಗೆ ಅಚ್ಚರಿ ಮೂಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಮಾನವ-ಪ್ರಾಣಿ ಸಂಘರ್ಷಗಳ ಸಂಖ್ಯೆಯನ್ನು ಅರಣ್ಯ ಇಲಾಖೆ ಬಹಿರಂಗಪಡಿಸಿದ್ದು, ಮಾನವರ ಸಾವಿನ ಸಂಖ್ಯೆಯಲ್ಲಿ ಗಮನಾರ್ಹವಾಗಿ ಇಳಿಕೆ ಕಂಡುಬಂದಿದೆ.

ಮಾಧ್ಯಮಕ್ಕೆ ಲಭ್ಯವಿರುವ ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, 2023-2024ರ ಅವಧಿಯಲ್ಲಿ ಕೇರಳದಲ್ಲಿ ಆನೆಗಳ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 2021-2022ರಲ್ಲಿ ದಾಖಲಾದ ಸಂಖ್ಯೆಗಿಂತ ಕಡಿಮೆಯಾಗಿದೆ. ಅಂಕಿಅಂಶಗಳ ಪ್ರಕಾರ, 2023-2024ರಲ್ಲಿ ಕೇರಳದಲ್ಲಿ ಆನೆ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದರೆ, 2022-2023ರಲ್ಲಿ 27 ಜನರು ಮತ್ತು 2021-2022ರಲ್ಲಿ 35 ಜನರು ಬಲಿಯಾಗಿದ್ದಾರೆ.

ಮಾನವ-ಪ್ರಾಣಿ ಸಂಘರ್ಷಕ್ಕೆ ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಜಾರ್ಖಂಡ್‌ನ ಅರಣ್ಯ ಇಲಾಖೆ ಮೂಲಗಳ ಪ್ರಕಾರ ಪ್ರತಿ ವರ್ಷ ಸರಾಸರಿ 100ಕ್ಕೂ ಹೆಚ್ಚು ಮಂದಿ ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದಿಂದ 148 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಹೆಚ್ಚುವರಿಯಾಗಿ, ಐದು ವರ್ಷಗಳ ಅವಧಿಯಲ್ಲಿ ಒಡಿಶಾ, ಅಸ್ಸೋಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾನವ-ಪ್ರಾಣಿ ಸಂಘರ್ಷಗಳಲ್ಲಿ ಕ್ರಮವಾಗಿ 499, 385 ಮತ್ತು 358 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಡೇಟಾವನ್ನು ಒದಗಿಸಿದೆ. ಸದ್ಯದ ಅಂದಾಜಿನ ಪ್ರಕಾರ ಕೇರಳದಲ್ಲಿ ಆನೆಗಳ ಸಂಖ್ಯೆ ಸುಮಾರು 2,000 ರಿಂದ 2,500 ಇವೆ ಎಂದು ಕೇರಳದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ (ಪಿಸಿಸಿಎಫ್ ಮತ್ತು ಸಿಡಬ್ಲ್ಯೂಡಬ್ಲ್ಯು) ಡಿ.ಜಯಪ್ರಸಾದ್ ತಿಳಿಸಿದರು.

ನಾವು ವಯನಾಡಿನಲ್ಲಿ ಮಾತ್ರವಲ್ಲದೆ ತಮಿಳುನಾಡು ಮತ್ತು ಕರ್ನಾಟಕದ ನೆರೆಯ ಅರಣ್ಯ ಪ್ರದೇಶಗಳಲ್ಲಿಯೂ ಪ್ರಾಣಿಗಳ ಬಗ್ಗೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಮಾಹಿತಿ ನೀಡಿದ್ದೇವೆ. ಇದರ ಬಗ್ಗೆ ಅಧ್ಯಯನ ಮಾಡಲು ಕೋರಲಾಗಿದೆ. "ಅಧ್ಯಯನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಾಣಿಗಳು ಕಂಡುಬಂದರೆ ನಾವು ಅವುಗಳನ್ನು ಬೇರೆಡೆ ಸ್ಥಳಾಂತರಿಸುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ" ಅಂತಾ ಜಯಪ್ರಸಾದ್​ ಹೇಳಿದರು.

ಓದಿ:ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು: ಅರಣ್ಯ ಇಲಾಖೆ ವಿರುದ್ಧ ಬೃಹತ್​ ಪ್ರತಿಭಟನೆ

ABOUT THE AUTHOR

...view details