ಕರ್ನಾಟಕ

karnataka

ಸೊರೇನ್‌ ಹಿಡಿದು ಕೊಟ್ಟವರಿಗೆ ₹11 ಸಾವಿರ ಬಹುಮಾನ: ಬಿಜೆಪಿಯ ಬಾಬುಲಾಲ್ ಮರಾಂಡಿ

By ANI

Published : Jan 31, 2024, 9:26 AM IST

Babulal Marandi: ಸಿಎಂ ಹೇಮಂತ್ ಸೊರೇನ್ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

Babulal Marandi posted on x about Jharkhand CM
Babulal Marandi posted on x about Jharkhand CM

ರಾಂಚಿ(ಜಾರ್ಖಂಡ್): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಅವರ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ ಹಾಗೂ ಅವರನ್ನು ಹುಡುಕಿ ಹಿಡಿದು ಕರೆತಂದವರಿಗೆ ಬಹುಮಾನ ರೂಪದಲ್ಲಿ 11,000 ರೂಪಾಯಿ ನೀಡಲಾಗುವುದು ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರತ ಪೋಸ್ಟ್​ ಹಾಕಿದ್ದಾರೆ. ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವ ಬಾಬುಲಾಲ್, ಸಿಎಂ ಹಠಾತ್ ನಾಪತ್ತೆಯಿಂದಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜರಿದಿದ್ದಾರೆ.

"ಇಡಿ ದಾಳಿಯಿಂದ ಜಾರ್ಖಂಡ್ ಮುಖ್ಯಮಂತ್ರಿ ಪಲಾಯನ ಮಾಡಿದ್ದಾರೆ. ಯಾರಾದರೂ ಅವರನ್ನು ಹುಡುಕಿ ಕರೆತಂದರೆ ನಾವು ಅವರಿಗೆ 11 ಸಾವಿರ ರೂ. ಬಹುಮಾನ ನೀಡುತ್ತೇವೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಇಡಿ ಸಮನ್ಸ್ ನೀಡಿದೆ. ವಿಚಾರಣೆಗೆ ಸಹಕರಿಸದೇ ಮನೆಯಿಂದ ಕಾಣೆಯಾಗಿದ್ದಾರೆ. ಮಧ್ಯರಾತ್ರಿ ಕಳ್ಳಬಾಗಿಲಿನಿಂದ ಓಡಿಹೋಗುವ ಮೂಲಕ ಅಪರಾಧಿಗಳಿಗೆ ಉತ್ತೇಜನ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಕಾಣುತ್ತಿಲ್ಲ. ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಹಾಗೂ ಗುಪ್ತಚರ ಇಲಾಖೆಗೆ ಸಿಎಂ ಸ್ಥಳದ ಬಗ್ಗೆ ಮಾಹಿತಿ ಇಲ್ಲದಿರುವುದು ಗಂಭೀರ ವಿಚಾರ. ಇದು ಮುಖ್ಯಮಂತ್ರಿಯವರ ವೈಯಕ್ತಿಕ ಭದ್ರತೆಗೆ ಮಾತ್ರವಲ್ಲದೆ ಜಾರ್ಖಂಡ್‌ನ ಮೂರೂವರೆ ಕೋಟಿ ಜನರ ಸುರಕ್ಷತೆಯ ವಿಚಾರ" ಎಂದಿದ್ದಾರೆ.

ಇದೇ ಪೋಸ್ಟ್‌ನಲ್ಲಿ, ಬಿಳಿ ಅಂಗಿ, ಕಪ್ಪು ಪ್ಯಾಂಟ್ ಮತ್ತು ಚಪ್ಪಲಿ ಧರಿಸಿದ್ದು 5 ಅಡಿ 2 ಇಂಚು ಎತ್ತರ ಇದ್ದಾರೆ ಎಂದೂ ಸಹ ಬರೆದಿದ್ದಾರೆ.

ಭೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ಸೋಮವಾರ ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತ್ತು. ಸೋಮವಾರ ಸಂಜೆಯಿಂದ ಅಲ್ಲಿಯೇ ಮೊಕ್ಕಾಂ ಹೂಡಿ ಸಾಕಷ್ಟು ಶೋಧ ನಡೆಸಿತ್ತು. ಕೆಲವು ಬೆಲೆಬಾಳುವ ದಾಖಲೆಗಳು ಹಾಗೂ ಬಿಎಂಡಬ್ಲ್ಯೂ ಕಾರು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಸೊರೇನ್​ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:ಜಾರ್ಖಂಡ್​ ಸಿಎಂ ಸೊರೇನ್​ಗಾಗಿ ಇಡಿ ಅಧಿಕಾರಿಗಳ ಹುಡುಕಾಟ

ABOUT THE AUTHOR

...view details