ಕರ್ನಾಟಕ

karnataka

ಮಡಿಕೇರಿಯಲ್ಲಿ ಅದ್ಧೂರಿ ಗಣೇಶೋತ್ಸವ: ಸ್ತಬ್ಧ ಚಿತ್ರ ಪ್ರದರ್ಶಿಸಿ ವಿಶೇಷ ಆಚರಣೆ

By

Published : Sep 11, 2022, 9:42 AM IST

ಕೊಡಗು: ಮಂಜಿನ‌ ನಗರಿ ಮಡಿಕೇರಿಯಲ್ಲಿ ಅದ್ಧೂರಿ ಗಣೇಶ ನಿಮಜ್ಜನ ಕಾರ್ಯಕ್ರಮ ನಡೆಯಿತು. ಶಾಂತಿನಿಕೇತನ ಯುವಕ ಸಂಘದ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಮಾಡಲಾಯಿತು. ರಂಗು ರಂಗಿನ ಬೆಳಕು, ಮಂಜಿನ ಹನಿಗಳ‌ ನಡುವೆ ನಡೆದ ಉತ್ಸವದಲ್ಲಿ ಡಿಜೆ‌ ಹಾಡಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದರು. ದಸರಾ ಆಚರಣೆಯ ರೀತಿಯಲ್ಲಿ ನಗರದ ತಿಮ್ಮಯ್ಯ ವೃತ್ತದಲ್ಲಿ ಪೌರಾಣಿಕ ತಾರಕಾಸುರ ಗರ್ವಭಂಗ ಕಥಾಹಂದರದ ಸ್ತಬ್ಧಚಿತ್ರ ಪ್ರದರ್ಶಿಸಲಾಯಿತು. ತಾರಕ ಒಬ್ಬ ರಾಕ್ಷಸ. ಈತನ ಉಪಟಳ ಸಹಿಸಲಾರದ ದೇವತೆಗಳ ಮೊರೆ ಕೇಳಿ ಕುಮಾರಸಂಭವಕ್ಕೆ ಈಶ್ವರ ಅಣಿಯಾಗುತ್ತಾನೆ. ಏಳು ದಿನದ ಬಾಲಕನಿಂದ ತಾರಕನ ವಧೆಯಾಗಬೇಕಾಗಿದ್ದುದರಿಂದ ಶಿವನ ವಂಶಾವತಾರಿಯಾದ ಗಣಪನಿಂದ ತಾರಕಾಸುರನನ್ನು ಕೊಲ್ಲುವುದು ಸಾಧ್ಯವಾಗುತ್ತದೆ. ಈ ಕಥಾ ಸಂಕಲನವನ್ನು ಶಬ್ಧ, ಬೆಳಕು ಮತ್ತು ಆ್ಯಕ್ಷನ್ ಮೂಲಕ ಜನರಿಗೆ ತಿಳಿಸಲಾಯಿತು.

ABOUT THE AUTHOR

...view details