ಕರ್ನಾಟಕ

karnataka

ಅದ್ಧೂರಿ ಜಂಬೂಸವಾರಿಯಲ್ಲಿ ಮೆರಗು ನೀಡಿದ ಸ್ಥಬ್ದ ಚಿತ್ರ : ಈ ಬಾರಿಯ ವಿಶೇಷತೆಗಳೇನು ಇಲ್ಲಿದೆ ನೋಡಿ..

By

Published : Oct 5, 2022, 8:52 PM IST

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಆಕರ್ಷಕ ಸ್ಥಬ್ದ ಚಿತ್ರಗಳು ಜಂಬೂಸವಾರಿಯ ಮೆರವಣಿಗೆಗೆ ಮೆರಗು ನೀಡಿದೆ. ಅರಮನೆಯ ವಾದ್ಯಗೋಷ್ಠಿ ಸೇರಿದಂತೆ 48 ಅದ್ಭುತ ಸ್ಥಬ್ದ ಚಿತ್ರಗಳು, 50ಕ್ಕೂ ಹೆಚ್ಚು ಕಲಾ ತಂಡಗಳು ಪ್ರದರ್ಶನ ವಿಜೃಂಭಿಸಿದವು. ಪ್ರಮುಖವಾಗಿ ಚಾಮರಾಜನಗರದ ವನ್ಯಧಾಮ, ಮಹದೇಶ್ವರ ವಿಗ್ರಹ ಮತ್ತು ದಿವಂಗತ ಪುನೀತ್ ರಾಜಕುಮಾರ್ ಪ್ರತಿಮೆ. ಮೈಸೂರಿನ ಸೋಮನಾಥ ದೇವಾಲಯ. ಬಾಗಲಕೋಟೆಯ ಮುದೊಳ್ ಶ್ವಾನ, ಇಳಕಲ್ ಸೀರೆ. ಬಳ್ಳಾರಿಯ ದುರ್ಗಮ್ಮ ದೇವಸ್ಥಾನ. ಬೆಳಗಾವಿಯ ರೇಣುಕಾದೇವಿ ದೇವಾಲಯ ಮತ್ತು ಕಮಲ ಬಸದಿ. ಬೆಂಗಳೂರು ಗ್ರಾಮಾಂತರ ಕಪಿಲೇಶ್ವರ ದೇವಾಲಯ, ಜೈನ ಬಸದಿ ಮತ್ತು ನಗರದ ಕಡಲೆಕಾಯಿ ಪರಸೆ, ಬಸವಣ್ಣ ಗುಡಿ. ಬೀದರ್​ನ ಅನುಭವ ಮಂಟಪ. ಚಿಕ್ಕಬಳ್ಳಾಪುರದ ಗ್ರೀನ್ ನಂದಿ ಮತ್ತು ಭೋಗನಂದೀಶ್ವರ ದೇವಾಲಯ ಸ್ಥಬ್ದ ಚಿತ್ರಗಳು ಜಂಬೂಸವಾರಿಯ ಮೆರವಣಿಗೆಗೆ ಮೆರಗು ನೀಡಿದ್ದು ಇವುಗಳನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು.

ABOUT THE AUTHOR

...view details