ಕರ್ನಾಟಕ

karnataka

ಕೊಡಗಿನಲ್ಲಿ ಹಸುವಿನ ರಕ್ತ ಹೀರಿ ಕಾಲ್ಕಿತ್ತ ವ್ಯಾಘ್ರ: ಬೆಚ್ಚಿದ ಸ್ಥಳೀಯರು!

By

Published : Dec 5, 2019, 8:14 PM IST

ತಾಲೂಕಿನ ಶ್ರೀಮಂಗಲ ಸಮೀಪದ ಕಾಕೂರು ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದರ ಮೇಲೆ ಹುಲಿ ದಾಳಿ ಮಾಡಿ ಕೊಂದಿರುವ ಘಟನೆ ನಡೆದಿದೆ. ಕಾಕೂರು ಗ್ರಾಮದ ನಳಿನಿ ಮಹೇಶ್‌ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಹಲಿ ಹಸುವಿನ ಕುತ್ತಿಗೆ ಭಾಗವನ್ನು ಕಚ್ಚಿ ರಕ್ತ ಹೀರಿ ಕಾಲ್ಕಿತ್ತಿದೆ. ಈಗಾಗಲೇ ಕೊಡಗಿನ ಗಡಿ ಭಾಗದಲ್ಲಿ ನಿರಂತರವಾಗಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸ್ಥಳೀಯರು ಆತಂಕದಲ್ಲಿ ಬದುಕುವಂತಾಗಿದೆ. ಅಲ್ಲದೆ ಹುಲಿಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ABOUT THE AUTHOR

...view details