ಕರ್ನಾಟಕ

karnataka

ರಾಮನಗರ: ಬೆಲೆ ಹೆಚ್ಚಳ ಖಂಡಿಸಿ ಭಾರತೀಯ ಪರಿವರ್ತನ ಸಂಘದಿಂದ ಪ್ರತಿಭಟನೆ

By

Published : Feb 16, 2021, 3:50 PM IST

ರಾಮನಗರ: ಪೆಟ್ರೋಲ್, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ಭಾರತೀಯ ಪರಿವರ್ತನ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ನಿಯಂತ್ರಣದ ಹಕ್ಕನ್ನು ಕೇಂದ್ರ ಸರ್ಕಾರ ಕಳೆದುಕೊಂಡಿದೆ. ದರ ನಿಗದಿಪಡಿಸಿವ ಹಕ್ಕು ಅದಾನಿ, ಅಂಬಾನಿ ಹಾಗೂ ಬಂಡವಾಳ ಶಾಹಿಗಳ ಬಳಿ ಇದೆ ಎಂದು ಆರೋಪಿಸಿದರು. ಕೂಡಲೇ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡಬೇಕು. ಈ ಹೋರಾಟ ಕೇವಲ‌ ಸಾಂಕೇತಿಕವಾಗಿದ್ದು, ಮುಂದಿನ ದಿನಗಳಲ್ಲಿ‌ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ABOUT THE AUTHOR

...view details