ಕರ್ನಾಟಕ

karnataka

ಮೈಸೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ ರೈತ: ವಿಡಿಯೋ

By

Published : Feb 6, 2021, 2:38 PM IST

ರಾಷ್ಟ್ರೀಯ ಹೆದ್ದಾರಿ ಪ್ರತಿಭಟನೆ ವೇಳೆಯಲ್ಲಿ ರೈತರನ್ನು ಬಂಧಿಸುವ ಸಂದರ್ಭದಲ್ಲಿ ಮನನೊಂದ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಬಂಡಿಪಾಳ್ಯ ವೃತ್ತದ ರೈತರು, ಪ್ರತಿಭಟನೆ ನಡೆಸುತ್ತಾ ಅಡುಗೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ರೈತರನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ರಂಗಸ್ವಾಮಿ ಎಂಬ ರೈತನನ್ನು ಬಂಧಿಸಲು ಮುಂದಾದಾಗ, ಹಸಿರು ಟವಲಿನಲ್ಲಿಯೇ ಕುತ್ತಿಗೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭ ಅಲರ್ಟ್​ ಆದ ಪೊಲೀಸರು ಟವಲನ್ನು ಕಿತ್ತುಕೊಂಡು ಸದ್ಯ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಇನ್ನು ಪ್ರತಿಭಟನಾನಿರತರು ಪೊಲೀಸರ ಮನವೊಲಿಕೆಗೆ ಬಗ್ಗದ ಹಿನ್ನೆಲೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲ ಪುರ ನಾಗೇಂದ್ರ ಹೇಳಿದಂತೆ ನೂರಾರು ರೈತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡ್ರು.

ABOUT THE AUTHOR

...view details