ಕರ್ನಾಟಕ

karnataka

ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ್​​ ಹೆಬ್ಬಾರ್​​​ ನಾಮಪತ್ರ ಸಲ್ಲಿಕೆ

By

Published : Nov 18, 2019, 1:51 PM IST

ಶಿರಸಿ: ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿರುವ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಯಲ್ಲಾಪುರ ಉಪ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು. ‌ಪತ್ನಿ ವನಜಾಕ್ಷಿ, ಮಾಜಿ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಮುಂಡಗೋಡ ಬಿಜೆಪಿ ಮುಖಂಡ ಎಲ್.ಟಿ.ಪಾಟೀಲ್, ಬೆಂಬಲಿಗ ದ್ಯಾಮಣ್ಣ ದೊಡ್ಮನಿ ಜೊತೆಯಲ್ಲಿ ಇಲ್ಲಿನ ತಹಶೀಲ್ದಾರ ಕಚೇರಿಯ ಚುನಾವಣಾ ಕಾರ್ಯಾಲಯಕ್ಕೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು.

ABOUT THE AUTHOR

...view details