ಕರ್ನಾಟಕ

karnataka

Watch video: ಡ್ರೋನ್​ ಕ್ಯಾಮರಾದಲ್ಲಿ‌ ರಾಧಾನಗರಿ ಡ್ಯಾಂ ಪ್ರಕೃತಿ ಸೊಬಗು ಸೆರೆ

By

Published : Jul 27, 2023, 3:44 PM IST

ರಾಧಾನಗರಿ ಡ್ಯಾಂ

ಚಿಕ್ಕೋಡಿ (ಬೆಳಗಾವಿ): ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವು ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನೊಂದೆಡೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿರುವ ರಾಧಾನಗರಿ ಡ್ಯಾಂ ಭರ್ತಿಯಾದ ಎಲ್ಲ ಗೇಟ್‌ಗಳಿಂದ ನೀರು ಬಿಡುಗಡೆ ದೃಶ್ಯ ಮನಮೋಹಕವಾಗಿದ್ದು, ಹಾಲಿನ ನೊರೆಯಂತೆ ಹರಿಯುತ್ತಿರುವ ಪ್ರಕೃತಿ ವಿಸ್ಮಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. 

ಈಗಾಗಲೇ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಭೋಗಾವತಿ ನದಿಯ ರಾಧಾನಗರಿ ಡ್ಯಾಂನಿಂದ ಸುಮಾರು 7000 ಕ್ಯೂಸೆಕ್​​ ನೀರು ಬಿಡುಗಡೆ ಮಾಡಲಾಗಿದೆ. ಸದ್ಯ ಕೊಲ್ಲಾಪುರದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಜಿಲ್ಲೆ ಪ್ರವಾಹದಿಂದ ತತ್ತರಿಸಿ ಹೋಗಿದೆ. ಇನ್ನು ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. 24,901 ಕ್ಯೂಸೆಕ್‌ ಒಳಹರಿವು ಇದೆ. ಹೀಗಾಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಈ ವೇಳೆ, ನೀರು ಧುಮ್ಮುಕ್ಕಿ ಹರಿಯುತ್ತಿರುವ ದೃಶ್ಯವನ್ನು ಡ್ರೋನ್​ ಕ್ಯಾಮರಾದ ಮೂಲಕ ಸೆರೆ ಹಿಡಿಯಲಾಗಿದೆ. ಇದೀಗ ವಿಡಿಯೋ ನೋಡುಗರ ಕಣ್ಮನ ಸೆಳೆಯುತ್ತಿದೆ. 

ಇದನ್ನೂ ಓದಿ :ನಂಜನಗೂಡಿನಲ್ಲಿ ಸ್ನಾನಘಟ್ಟ ಮುಳುಗಡೆ; ಡ್ರೋನ್​​ ಕಣ್ಣಿನಲ್ಲಿ ಕಬಿನಿ ಜಲಾಶಯದ ದೃಶ್ಯ- ವಿಡಿಯೋ

ABOUT THE AUTHOR

...view details