ಕರ್ನಾಟಕ

karnataka

ಆನೇಕಲ್: ಇಬ್ಬರು ಅಂತರರಾಜ್ಯ ಕಳ್ಳರಿಂದ 20 ಬೈಕ್ ಜಪ್ತಿ

By ETV Bharat Karnataka Team

Published : Oct 13, 2023, 9:44 PM IST

ಸೂರ್ಯನಗರ ಪೊಲೀಸ್ ಠಾಣೆ

ಆನೇಕಲ್ :ಆನೇಕಲ್ ಸುತ್ತಲಿನ ಐದು ಪೊಲೀಸ್ ಠಾಣೆಗಳಲ್ಲಿ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ದುಬಾರಿ ಬೈಕ್​ಗಳ ಹ್ಯಾಂಡಲ್ ಲಾಕ್ ಮುರಿದು ಕದ್ದೊಯ್ದಿದ್ದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಹೊಸೂರು ಪಟ್ಟಣದ 20 ವರ್ಷದ ಕೃಷ್ಣ ಅಲಿಯಾಸ್ ಕ್ರಿಸ್ಟೋಪರ್ ಸುನಾಮಿ ಮತ್ತು 22 ವರ್ಷದ ಸಾಹುಲ ಹಮೀದ್ ಆರೋಪಿಗಳು. ಆನೇಕಲ್-1, ಅತ್ತಿಬೆಲೆ-1, ಸೂರ್ಯನಗರ-9, ಹೆಬ್ಬಗೋಡಿ-4 ಮತ್ತು ಪರಪ್ಪನ ಅಗ್ರಹಾರ-1 ರಂತೆ ಒಟ್ಟು ಇಪ್ಪತ್ತು ಬೈಕ್​ಗಳು ಜಪ್ತಿಯಾಗಿವೆ.

ಈ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳ ಮನೆ ಮುಂದೆ ಬೇಜವಾಬ್ದಾರಿಯಾಗಿ ನಿಲ್ಲಿಸಿದ್ದ ದುಬಾರಿ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ತಡರಾತ್ರಿ ಪರಾರಿಯಾಗುತ್ತಿದ್ದುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮೋಹನ್ ಮಾರ್ಗದರ್ಶನದಲ್ಲಿ ಪಿಐ ಸಂಜೀವ್ ಕುಮಾರ್ ಜೆ. ಮಹಜನ್, ಎಸ್ಐ ಬಸವರಾಜ್ ಸವಟಗಿ, ಎಎಸ್ಐ ನಾಗರಾಜು, ಸಿಬ್ಬಂದಿಗಳಾದ ಸತೀಶ್, ಕೃಷ್ಣಮೂರ್ತಿ ಮತ್ತು ವಿನಯ್ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ:ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ 22 ಬೈಕ್‌ ವಶಕ್ಕೆ, ಗಾಂಜಾ ಆರೋಪಿ ಸೆರೆ

ABOUT THE AUTHOR

...view details