ಕರ್ನಾಟಕ

karnataka

ಮೈಸೂರು ದಸರಾ ಜಂಬೂಸವಾರಿಗೆ 49 ಸ್ತಬ್ಧ ಚಿತ್ರಗಳ ಮೆರುಗು, ಭರದ ಸಿದ್ಧತೆ- ವಿಡಿಯೋ

By ETV Bharat Karnataka Team

Published : Oct 22, 2023, 6:23 PM IST

ಸ್ತಬ್ದ ಚಿತ್ರ

ಮೈಸೂರು:ಲೋಕ ಪ್ರಸಿದ್ಧಿ ಪಡೆದ ಮೈಸೂರು ಜಂಬೂಸವಾರಿಗೆ ಮೆರುಗು ನೀಡುವ ವರ್ಣರಂಜಿತ ಸ್ತಬ್ಧ ಚಿತ್ರಗಳು ನಾಡಿನ ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸುತ್ತವೆ. ಇದಕ್ಕಾಗಿ 49 ಸ್ತಬ್ಧ ಚಿತ್ರಗಳ ತಯಾರಿ ಕೆಲಸ ಸಾಗುತ್ತಿದೆ. ಈ ಬಾರಿ 31 ಜಿಲ್ಲೆಗಳ ಒಂದೊಂದು ಸ್ತಬ್ದ ಚಿತ್ರಗಳು ಇರಲಿವೆ. ಅದರ ಜತೆಗೆ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳ 16 ಸ್ತಬ್ಧ ಚಿತ್ರಗಳು ಹಾಗು ದಸರಾ ಸಮಿತಿಯಿಂದಲೂ ಎರಡು ಸ್ತಬ್ಧ ಚಿತ್ರಗಳು ರೂಪುಗೊಳ್ಳುತ್ತಿವೆ. 

ಈ ಬಾರಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸ್ತಬ್ಧ ಚಿತ್ರಗಳು, ಇಸ್ರೋ ಚಂದ್ರಯಾನ-3 ಯೋಜನೆ, ಮಲೆಮಾದೇಶ್ವರ ಸ್ವಾಮಿಯ ಪ್ರತಿಮೆ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವ ಐತಿಹಾಸಿಕ ತಾಣಗಳಾದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳು ಇರಲಿವೆ. ಇದರೊಂದಿಗೆ ಮೈಸೂರು ಜಿಲ್ಲಾ ಪಂಚಾಯಿತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸೇರಿದಂತೆ ನಾಡಿನ ಕಲೆ, ಸಾಹಿತ್ಯ ಹಾಗು ಸಂಸ್ಕೃತಿಯನ್ನು ಬಿಂಬಿಸುವ ಒಟ್ಟು 49 ಸ್ತಬ್ಧ ಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಇದನ್ನೂ ಓದಿ:ಮೈಸೂರು ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ: ವಿಡಿಯೋ

ABOUT THE AUTHOR

...view details