ಕರ್ನಾಟಕ

karnataka

ಶಿಕಾರಿ ಹುಡುಕಿ ಹೊರಟ ಚಿರತೆ: ಜಾಲತಾಣದಲ್ಲಿ ವಿಡಿಯೋ ವೈರಲ್​

By ETV Bharat Karnataka Team

Published : Nov 28, 2023, 6:06 PM IST

ಚಿರತೆಯ ವೈರಲ್​ ವಿಡಿಯೋ

ಮೈಸೂರು:ಚಿರತೆಯೊಂದು ಶಿಕಾರಿ ಅರಸಿ ರಾತ್ರಿ ಜಮೀನಿನಲ್ಲಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸಮೀಪದ ಗೌಡರ ಹುಂಡಿ ಗ್ರಾಮದ ರೈತ ಶೃಂಗಾರ್ ಎಂಬುವರ ಜಮೀನಿನ ಬಳಿ ಈ ಚಿರತೆ ಕಾಣಿಸಿಕೊಂಡಿದೆ. ಜಮೀನುಗಳ ಮಧ್ಯೆ ಬಿಂದಾಸ್ ಆಗಿ ಸಾಗುತ್ತಿರುವ ಚಿರತೆ ದೃಶ್ಯವನ್ನು ಕಾರಿನಲ್ಲಿ ಅದರ ಹಿಂದೆ ಬರುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಗ್ರಾಮದ ಮುಖ್ಯರಸ್ತೆಯ ಸಮೀಪದ ಜಮೀನಿನ ಕಾಲುದಾರಿಯಲ್ಲಿ ರಾತ್ರಿ ಸುಮಾರು 8.30ರ ಸಮಯದಲ್ಲಿ ಚಿರತೆ ನಡೆದು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ. 

ಚಿರತೆ ಓಡಾಟದಿಂದ ಸ್ಥಳೀಯರಲ್ಲಿ ಆತಂಕ:ನಂಜನಗೂಡು ತಾಲೂಕಿನಲ್ಲಿ ಒಂದೆಡೆ ಹುಲಿ ಹಾವಳಿ ಇದ್ದರೆ, ಮತ್ತೊಂದೆಡೆ ಚಿರತೆ ಬಿಂದಾಸ್ ಆಗಿ ರೈತರ ಜಮೀನುಗಳಲ್ಲಿ ಓಡಾಡುತ್ತಿರುವುದರಿಂದ ಸ್ಥಳೀಯ ರೈತರಲ್ಲಿ ಭಯ ಕಾಡುತ್ತಿದೆ. ಅರಣ್ಯ ಪ್ರದೇಶ ಇಲ್ಲದಿದ್ದರೂ ಪಟ್ಟಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಿಗೆ ಆತಂಕ ಹೆಚ್ಚಿಸಿದೆ. ಬಿಂದಾಸ್ ಆಗಿ ಓಡಾಡುತ್ತಿದ್ದ ಚಿರತೆಯನ್ನು ಶೀಘ್ರ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯವರಿಗೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. 

ಇದನ್ನೂ ಓದಿ:ಮೈಸೂರು: ತಾಂಡವಪುರದ ಜಮೀನಿನಲ್ಲಿ ಹುಲಿ ಪ್ರತ್ಯಕ್ಷ; ಜನರ ಆತಂಕ

ABOUT THE AUTHOR

...view details