ಕರ್ನಾಟಕ

karnataka

ವಿಜಯಪುರದಲ್ಲಿ ತಲ್ವಾರ್ ಹಿಡಿದು ವಿಜಯೋತ್ಸವ ಆಚರಿಸಿದ ಅಭಿಮಾನಿ- ವೈರಲ್​ ವಿಡಿಯೋ

By

Published : May 14, 2023, 11:18 AM IST

ವೈರಲ್​ ವಿಡಿಯೋ

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್ ಗೆಲುವು ಸಾಧಿಸಿದ್ದಾರೆ. ಯತ್ನಾಳ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದಲ್ಲಿ ಅವರ ಅಭಿಮಾನಿಯೊಬ್ಬ ತಲ್ವಾರ್ ಪ್ರದರ್ಶನ ಮಾಡಿದ ಘಟನೆ ನಡೆದಿದೆ.

ಮಧ್ಯಾಹ್ನ ಬಸನಗೌಡ ಪಾಟೀಲ ಯತ್ನಾಳ್​ ಚುನಾವಣೆಯಲ್ಲಿ ಜಯ ಗಳಿಸುತ್ತಿದ್ದಂತೆ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಲು ಶ್ರೀ ಸಿದ್ದೇಶ್ವರ ದೇವಸ್ಥಾನ ಬಳಿ ಜಮಾವಣೆಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಬಳಿಕ ರ‍್ಯಾಲಿ ನಡೆಸಿದರು. ಯತ್ನಾಳ್​ ಅಭಿಮಾನಿಯೊಬ್ಬ ತಲ್ವಾರ್​ ಕೈಯ್ಯಲ್ಲಿ ಹಿಡಿದುಕೊಂಡು ರಸ್ತೆ ಮೇಲೆ ಸುತ್ತುತ್ತಾ ಸಂಭ್ರಮಾಚರಣೆ ಮಾಡಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್​ ಅಭ್ಯರ್ಥಿ ಅಬ್ದುಲ್​ ಹಮೀದ್​ ಮುಶ್ರೀಫ್​ ವಿರುದ್ಧ 8,223 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಟ್ಟು 94,211 ಮತಗಳನ್ನು ಪಡೆದಿದ್ದು, ಅಬ್ದುಲ್​​ ಹಮೀದ್​​​ ಮುಷರೀಫ್ 85,978 ಮತ ಪಡೆದಿದ್ದಾರೆ.

ಇದನ್ನೂ ಓದಿ :ವಿಜಯಪುರ ನಗರ ಕ್ಷೇತ್ರದಿಂದ ಮತ್ತೆ ಗೆಲುವು ದಾಖಲಿಸಿದ ಯತ್ನಾಳ್​​

ABOUT THE AUTHOR

...view details