ಕರ್ನಾಟಕ

karnataka

ಕಾಂಗ್ರೆಸ್ ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ: ಮಾಜಿ ಸಚಿವ ಶ್ರೀರಾಮುಲು ಆರೋಪ

By

Published : May 27, 2023, 3:52 PM IST

ಮಾಜಿ ಸಚಿವ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿದರು

ದೇವನಹಳ್ಳಿ: ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್ ಗ್ಯಾರಂಟಿ ಭರವಸೆಗಳು ಕಾರಣ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ. ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು, ಶ್ರೀರಾಮುಲು ಕಾಂಗ್ರೆಸ್​​ನವರು ಗ್ಯಾರಂಟಿಗಳನ್ನು ಅಧಿಕಾರಕ್ಕೇರಿ 24 ಗಂಟೆಯೊಳಗೆ ಈಡೇರಿಸುತ್ತೀವೆ ಅಂತಿದ್ರು. ಈಗ ಅಧಿಕಾರಕ್ಕೆ ಬಂದ ಮೇಲೆ ಕುಂಟು ನೆಪ ಹೇಳಿ ಕಂಡೀಷನ್ಸ್ ಹಾಕ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಹೇಳಿಕೊಂಡು ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ. ಗ್ಯಾರಂಟಿ ಅಶ್ವಾಸನೆಗಳ ಮೂಲಕ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ನಾವು ಸೋಲು ಅನುಭವಿಸಬೇಕಾಯಿತು ಎಂದು ತಿಳಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಮತ್ತೆ ಪುಟಿದೇಳುತ್ತೇವೆ. ಅಶ್ವಾಸನೆಗಳನ್ನು ಈಡೇರಿಸಲಿಲ್ಲ ಅಂದ್ರೆ ಮಹಿಳೆಯರು ರೊಚ್ಚಿಗೇಳುತ್ತಾರೆ. ಕೊಡೋಕೆ ಆಗಲ್ಲ ಅಂದ ಮೇಲೆ ಸುಳ್ಳು ಆಶ್ವಾಸನೆ ಯಾಕೆ ಕೊಡಬೇಕು. ಕಂಡೀಷನ್ಸ್ ಹಾಕಿದ್ರೆ ಯಾರಿಗೆ ಉಪಯೋಗ ಆಗುತ್ತೆ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಕಾಂಗ್ರೆಸ್​ನವರು ಎಂದು ವ್ಯಂಗ್ಯವಾಡಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್​‌ನವರಿಗೆ ಜನ ತಕ್ಕ ಶಿಕ್ಷೆ ಕೊಡ್ತಾರೆ. ಜೀವನದಲ್ಲಿ ಸೋಲು ಇಲ್ಲದ ನಾವು ಇಂದು ಸೋತಿದ್ದೇವೆ‌. ಸುಳ್ಳು ಅಶ್ವಾಸನೆಗಳ ಕಾರಣ ನಮಗೆ ಸೋಲಾಗಿದೆ. ಈ ಸರ್ಕಾರ ಸುಳ್ಳು ಹೇಳಿಕೊಂಡು ಹೆಣ್ಣು ಮಕ್ಕಳು ಕಾಂಗ್ರೆಸ್ ಕೈ ಹಿಡಿದ ಕಾರಣ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.

ಇದನ್ನೂಓದಿ:ಪುಟ್ಟರಂಗಶೆಟ್ಟಿಗೆ ತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ, ಅಭಿಮಾನಿಯಿಂದ ಸೂಸೈಡ್ ಪತ್ರ

ABOUT THE AUTHOR

...view details