Rope walking: ರಿಯೊ ಡಿ ಜನೈರೋದಲ್ಲಿ ಫ್ರಾನ್ಸ್ ರೋಪ್ ವಾಕರ್ ನಾಥನ್ ಪೌಲಿನ್ ಇಡೀ ವಿಶ್ವವೇ ಬೆರಗಾಗುವ ರೀತಿಯಲ್ಲ ಸಾಹಸ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ. ಪೌಲಿನ್ ಬ್ಯಾಬಿಲೋನಿಯಾ ಹಿಲ್ ಮತ್ತು ಉರ್ಕಾ ಹಿಲ್ ನಡುವೆ 80 ಮೀಟರ್ಗಳ (264 ಅಡಿಗಳು) ಎತ್ತರದಲ್ಲಿ ನಿರ್ಮಿಸಲಾಗಿದ್ದ ತೆಳುವಾದ ಹಗ್ಗದ ಮೇಲೆ ನಡೆದರು. ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೇ ಪೌಲಿನ್ 500 ಮೀಟರ್ ನಡೆದು ಗುರಿ ಮುಟ್ಟಿದರು. ಈ ಸಾಹಸ ಮಾಡುವುದೇ ನನ್ನ ಕನಸಾಗಿದೆ ಎಂದು ಪೌಲಿನ್ ಸಂತಸ ವ್ಯಕ್ತಪಡಿಸಿದರು.