ಕರ್ನಾಟಕ

karnataka

ಪಠಾಣ್​ ಯಶಸ್ಸು: ಸೂಪರ್ ಹಿಟ್ 'ಬ್ರಹ್ಮಾಸ್ತ್ರ' ನಟಿ ಆಲಿಯಾ ಭಟ್ ಹೀಗಂದ್ರು ನೋಡಿ!

By

Published : Feb 1, 2023, 6:17 PM IST

Updated : Feb 3, 2023, 8:39 PM IST

ಪಠಾಣ್​ ಬಗ್ಗೆ ನಟಿ ಆಲಿಯಾ ಭಟ್ ಹೇಳಿಕೆ

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗು ಜಾನ್​ ಅಬ್ರಹಾಂ ಮುಖ್ಯ ಭೂಮಿಕೆಯ ಪಠಾಣ್​ ಯಶಸ್ಸಿನ ಬಗ್ಗೆ ಬಾಲಿವುಡ್ ಬಹುಬೇಡಿಕೆಯ ನಟಿ ಆಲಿಯಾ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ದಿನಗಳು ಮುಂದುವರಿಯಲಿ ಎಂದು ಅವರು ಆಶಿಸಿಸದರು. ಬಹಿಷ್ಕಾರದ ಎಚ್ಚರಿಕೆ ನಡುವೆಯೂ ಜನವರಿ 25 ರಂದು ತೆರೆಕಂಡ ಸ್ಟೈಲಿಶ್ ಸ್ಪೈ ಥ್ರಿಲ್ಲರ್ ಪಠಾಣ್​ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡಿದೆ. ಕಳೆದ ಏಳು ದಿನಗಳಲ್ಲಿ ವಿಶ್ವದಾದ್ಯಂತ 634 ಕೋಟಿ ರೂ. ಕಲೆಕ್ಷನ್​ ಮಾಡಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ ಪಠಾಣ್​. "ಚಿತ್ರಗಳಿಗೆ ವಿರೋಧ ವ್ಯಕ್ತವಾಗುತ್ತದೆ. ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಾವು ಮನೋರಂಜನೆ ನೀಡಲು ಬಯಸುತ್ತೇವೆ. ಕಲಾವಿದರಲ್ಲಿ ಆಕ್ರಮಣಶೀಲತೆಯ ಭಾವನೆ ಇಲ್ಲ. ಪಠಾಣ್‌ನ ಯಶಸ್ಸು ಭಾರತೀಯ ಚಿತ್ರರಂಗಕ್ಕೆ ಸಂತೋಷದ ಕ್ಷಣ" ಎಂದು ಆಲಿಯಾ ಭಟ್ ತಿಳಿಸಿದರು.

ಪಠಾಣ್ ಸಿನಿಮಾ ಬ್ರಹ್ಮಾಸ್ತ್ರದ ಬಾಕ್ಸ್ ಆಫೀಸ್ ದಾಖಲೆಗಳನ್ನು ಬ್ರೇಕ್​ ಮಾಡಿರುವ ಬಗ್ಗೆ ಆಲಿಯಾ ಅವರಲ್ಲಿ ಕೇಳಿದಾಗ, ಪಠಾಣ್​ನಂತಹ ಚಿತ್ರವು ಕೇವಲ ಹಿಟ್ ಸಿನಿಮಾ ಅಲ್ಲ. ಬಹುಶಃ ಭಾರತೀಯ ಚಿತ್ರರಂಗದ ದೊಡ್ಡ ಬ್ಲಾಕ್​ ಬಸ್ಟರ್ ಸಿನಿಮಾ. ಚಿತ್ರರಂಗದ ಪ್ರತಿಯೊಬ್ಬರೂ ಬಹಳ ಸಂತೋಷವಾಗಿದ್ದಾರೆ ಎಂದು ಆಲಿಯಾ ಇತ್ತೀಚೆಗೆ ಮಾಧ್ಯಮದವರೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Last Updated : Feb 3, 2023, 8:39 PM IST

ABOUT THE AUTHOR

...view details