ETV Bharat / entertainment

ಗಲ್ಲಾಪೆಟ್ಟಿಗೆಯಲ್ಲಿ "ಪಠಾಣ್"​ ಕಮಾಲ್​: 6 ದಿನದಲ್ಲಿ ₹591 ಕೋಟಿ ಸಂಪಾದಿಸಿ ದಾಖಲೆ

author img

By

Published : Jan 31, 2023, 8:29 AM IST

Updated : Jan 31, 2023, 5:19 PM IST

ಶಾರುಖ್​ ಖಾನ್​ ನಟನೆಯ ಪಠಾಣ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ 591 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಮೊದಲಿದ್ದ ಎಲ್ಲ ದಾಖಲೆಗಳನ್ನು ಸಿನಿಮಾ ಮುರಿದಿದೆ.

pathaan-film-box-office-record
ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್​ ಕಮಾಲ್

ಮುಂಬೈ: ವಿವಾದಗಳಿಂದಲೇ ಸುದ್ದಿ ಮಾಡಿದ್ದ "ಪಠಾಣ್​" ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದ್ದು, ಈವರೆಗೂ 591 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಬಾಲಿವುಡ್​ ಇತಿಹಾಸದಲ್ಲೇ, ಮೊದಲ ವಾರದಲ್ಲಿ ಸಿನಿಮಾವೊಂದರ ಅತ್ಯಧಿಕ ಗಳಿಕೆ. ಪಠಾಣ್​ ಖ್ಯಾತಿಗೆ ಶಾರುಖ್ ​ಖಾನ್ ಅತೀವ ಸಂತಸ ವ್ಯಕ್ತಪಡಿಸಿದ್ದು, "4 ವರ್ಷಗಳಲ್ಲಿ ಕಳೆದುಕೊಂಡಿದ್ದನ್ನು ನಾಲ್ಕೇ ದಿನದಲ್ಲಿ ಗಳಿಸಿಕೊಂಡೆ" ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

6 ದಿನ, 591 ಕೋಟಿ: ಬಾಲಿವುಡ್​ ಬಾದ್​ಶಾ ಎಂದೇ ಖ್ಯಾತಿ ಗಳಿಸಿರುವ ಶಾರುಖ್ ಖಾನ್ ಸ್ಪೈ ಥ್ರಿಲ್ಲರ್ ಕಥೆಯಾಧರಿತ "ಪಠಾಣ್​" 6 ದಿನದಲ್ಲಿ ದಿನದಲ್ಲಿ 591 ಕೋಟಿ ರೂಪಾಯಿಗಳ ಗಳಿಕೆಯೊಂದಿಗೆ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಆರಂಭಿಕ ವಾರದಲ್ಲಿ ಅಧಿಕ ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆ ಬರೆಯಿತು. ಯಶ್‌ ರಾಜ್ ಫಿಲ್ಮ್ಸ್ ಪ್ರಕಾರ, ಚಿತ್ರವು ಆರು ದಿನಗಳಲ್ಲಿ ವಿಶ್ವದಾದ್ಯಂತ 591 ಕೋಟಿ ರೂಪಾಯಿ ಸಂಗ್ರಹಿಸಿದೆ.

ಶಾರರುಖ್​ ಖಾನ್​, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಾಹಸಮಯ ಚಿತ್ರ ಪಠಾಣ್​, ಭಾರತದಲ್ಲಿ 367 ಕೋಟಿ ರೂಪಾಯಿ ಸಂಗ್ರಹ ಆಗಿದ್ದರೆ, ವಿದೇಶಗಳಲ್ಲಿ 224 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಯಶ್‌ ರಾಜ್ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.

ದಿನನಿತ್ಯದ ಲೆಕ್ಕಾಚಾರ: ಸುಮಾರು 100 ದೇಶಗಳಲ್ಲಿ ತೆರೆ ಕಂಡಿರುವ ಪಠಾಣ್​ ಸಿನಿಮಾ ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಐದನೇ ದಿನ 112 ಕೋಟಿ (ಭಾರತದಲ್ಲಿ 70 ಕೊಟಿ ರೂ. + ವಿದೇಶಗಳಲ್ಲಿ 42 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಆರನೇ ದಿನ 41.5 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ.

pathaan Film Record
ಪಠಾಣ್ ಕಲೆಕ್ಷನ್

ಸಿನಿಮಾ ಜಗತ್ತಿನಾದ್ಯಂತ ಜನರನ್ನು ರಂಜಿಸುತ್ತಿದೆ. ಜನರನ್ನು ಚಿತ್ರಮಂದಿರಗಳಿಗೆ ಮತ್ತಷ್ಟು ಸೆಳೆಯುತ್ತಿದೆ. ಇದಕ್ಕಾಗಿ ನಾವು ಹೆಮ್ಮೆಪಡುತ್ತೇವೆ ಎಂದು ಯಶ್ ರಾಜ್ ಫಿಲಂಸ್ ಹೇಳಿದೆ. ಇದಕ್ಕೂ ಮೊದಲು ಸಲ್ಮಾನ್​ಖಾನ್​ರ ಏಕ್ ಥಾ ಟೈಗರ್ (2012) ಮತ್ತು ಟೈಗರ್ ಜಿಂದಾ ಹೈ (2017), ಹೃತಿಕ್ ರೋಷನ್​ರ ವಾರ್​ (2019) ಸಿನಿಮಾದ ಗಳಿಕೆ ದಾಖಲೆಯನ್ನು ಪುಡಿ ಮಾಡಿದೆ.

'ನೋವು ಮರೆಸಿತು': "ಪಠಾಣ್​ ಯಶಸ್ಸು ನಾಲ್ಕು ವರ್ಷದಿಂದ ಸಿನಿಮಾ ಮಾಡದ ನೋವನ್ನು ಮರೆಸಿದೆ. ಕಳೆದಿಕೊಂಡಿದ್ದೆಲ್ಲವನ್ನೂ ನಾಲ್ಕೇ ದಿನದಲ್ಲಿ ಮರಳಿ ಪಡೆದಿದ್ದೇನೆ" ಎಂದು ನಟ ಶಾರುಖ್​ ಖಾನ್​ ಹೇಳಿದ್ದಾರೆ. "ನಾನು ಕೆಲವೊಮ್ಮೆ ಭಯಪಟ್ಟಿದ್ದೇನೆ, ದುಃಖಿತನಾಗಿದ್ದೇನೆ, ಅನೇಕ ಸಲ ಆತ್ಮವಿಶ್ವಾಸವನ್ನೂ ಕಳೆದುಕೊಂಡಿದ್ದೆ. ಆದರೆ, ಮುಂದುವರಿಯುವುದನ್ನು ಮಾತ್ರ ನಿಲ್ಲಿಸಲಿಲ್ಲ. ನಾವು ದುರ್ಬಲರಾದಷ್ಟು ಬಲಶಾಲಿಯಾಗಲು ಸಾಧ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಸಿನಿಮಾ 500 ಕೋಟಿ ರೂ.ಗೂ ಅಧಿಕ ಹಣ ಗಳಿಕೆ ಮಾಡಿರುವುದಕ್ಕೆ ಸಂತೋಷವಾಗಿದೆ. ಆದಿತ್ಯ ಚೋಪ್ರಾ ಮತ್ತು ಸಿದ್ಧಾರ್ಥ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುವೆ. ಸಿನಿಮಾಗಳೇ ಇಲ್ಲದೇ, ಕೆಲಸ ಕಳೆದುಕೊಂಡಿದ್ದ ನನಗೆ ಅವಕಾಶ ನೀಡಿದರು. ಅವರಿಗೆ ನಾನೆಂದಿಗೂ ಋಣಿ" ಎಂದು ಹೇಳಿದ್ದಾರೆ.

'ಪ್ರೀತಿ ಕೊಡಿ ಸಾಕು': "ನಮಗೆ ಜನರ ಪ್ರೀತಿ ಮುಖ್ಯ. ಕೋಟ್ಯಂತರ ಹಣವಲ್ಲ. ಸಿನಿಮಾವನ್ನು ಪ್ರೀತಿಸುತ್ತೇವೆ. ಅದಕ್ಕಾಗಿ ಸಿನಿಮಾ ಮಾಡ್ತೀವಿ. ನೀವು ಸಿನಿಮಾ ನೋಡಿ ಪ್ರೀತಿ ನೀಡಿ. ನಾವು ಅಂತಹ ಪ್ರೀತಿಗಾಗಿ ಕಾಯುತ್ತೇವೆ. ನಾನು, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಮರ್​, ಅಕ್ಬರ್​, ಆಂಥೋನಿ ಇದ್ದ ಹಾಗೆ ಎಂದು ಶಾರೂಖ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಡಿದ ಭಾಷಣದಲ್ಲಿ 1977 ರಲ್ಲಿ ತೆರೆಕಂಡ ಅಮರ್​, ಅಕ್ಬರ್​, ಆಂಥೋನಿ ಸಿನಿಮಾವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ: ಐದನೇ ದಿನವೂ ಮುಂದುವರೆದ 'ಪಠಾಣ್'​ ಅಬ್ಬರ: ವಿಶ್ವಾದ್ಯಂತ 429 ಕೋಟಿ ಸಂಪಾದಿಸುವ ಮೂಲಕ ಬಾಕ್ಸ್​ ಆಫೀಸ್​ ಕಿಂಗ್ ಆದ ಶಾರುಖ್​

Last Updated : Jan 31, 2023, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.