ಕರ್ನಾಟಕ

karnataka

ತೂಕ ನಷ್ಟಕ್ಕೆ ಈ ಪಾನೀಯ ಸೇವಿಸಿ ಸಾಕು; ಆಮೇಲೆ ನೋಡಿ ಬದಲಾವಣೆ!

By ETV Bharat Karnataka Team

Published : Nov 4, 2023, 4:01 PM IST

ತೂಕ ನಿರ್ವಹಣೆಯಲ್ಲಿ ಪಾನೀಯಗಳು ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಈ ಪಾನೀಯಗಳು ಯಾವ ರೀತಿ ಮೋಡಿ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.

these-drinks-helps-to-reduce-weight
these-drinks-helps-to-reduce-weight

ಅಗತ್ಯವಾದ ಆಹಾರ ಪದ್ದತಿ, ಉತ್ತಮ ನಿದ್ರೆ ಮತ್ತು ನಿಯಮಿತ ವ್ಯಾಯಾಮಗಳು ಅನೇಕ ರೋಗಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ಅದರ ಜೊತೆಗೆ ಪಾನೀಯಗಳು ಕೂಡ ಆರೋಗ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ತೂಕ ನಿರ್ವಹಣೆಯಲ್ಲಿ ಪಾನೀಯಗಳು ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಈ ಪಾನೀಯಗಳು ಯಾವ ರೀತಿ ಮೋಡಿ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಕ್ರಿಸಾಂಥೆಮಮ್​​ಗಳು:ಕ್ರಿಸಾಂಥೆಮಮ್​ ಟೀ ಕಪ್​ ದೇಹದಲ್ಲಿನ ವಿಷವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದಕ್ಕೆ ಅರ್ಧ ನಿಂಬೆ ಜ್ಯೂಸ್​ ಮತ್ತು ಕಾಲು ಕಪ್​ ಸ್ಪೂನ್​ ಜೇನು ತುಪ್ಪವೂ ಕ್ರಿಸಾಂಥೆಮಮ್​ ಟೀ ರುಚಿ ಹೆಚ್ಚಿಸುತ್ತದೆ. ನಿದ್ದೆಗೆ ಜಾರುವ ಮುನ್ನ ರಾತ್ರಿ ಊಟವಾದ ಬಳಿಕ ಇದನ್ನು ಕುಡಿಯುವುದು ಉತ್ತಮ. ಅಲ್ಲದೇ, ಇದು ಜೀರ್ಣ ಕ್ರಿಯೆಗೂ ಸಹಾಯ ಮಾಡುತ್ತದೆ. ಇದರಿಂದ ಆತಂಕ ದೂರಾಗುವ ಜೊತೆಗೆ ರಾತ್ರಿಯ ಉತ್ತಮ ನಿದ್ರೆಗೆ ಸಹಾಯ ಆಗುತ್ತದೆ. ಇದು ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಅಧಿಕ ತೂಕದ ಸಮಸ್ಯೆಯಿಂದ ಹೊರ ಬರಲು ಸಹಾಯ ಮಾಡುತ್ತದೆ.

ದ್ರಾಕ್ಷಿ:ಮಲಗುವ ಮುನ್ನ ದ್ರಾಕ್ಷಿ ಹಣ್ಣಿನ ಜ್ಯೂಸ್​ ಅನ್ನು ಸೇವಿಸುವುದು ಕೂಡ ಅತ್ಯುತ್ತಮ ತೂಕ ಇಳಿಕೆಯ ಪರಿಹಾರ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ. ರೋಗ ನಿರೋಧಕತೆ ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ, ಮಲಬದ್ದತೆ ಸಮಸ್ಯೆ ತಡೆಯುತ್ತದೆ.

ಅರಿಶಿಣ ಸೇರಿಸಿ:ಅರಿಶಿಣವೂ ಚಯಾಪಚಯವನ್ನು ಸಮತೋಲನ ಮಾಡುವಲ್ಲಿ ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿಗೆ ಅರಿಶಿಣ ಬೆರಸಿ ಕೊಡುವುದು ಉತ್ತಮ. ಅರಿಶಿಣವೂ ದೇಹದ ವಿಷವನ್ನು ತೊಡೆದು ಹಾಕುತ್ತದೆ. ಜೊತೆಗೆ ಇದು ರಕ್ತದ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕಡಿಮೆ ಮಾಡುತ್ತದೆ. ಕಿಡ್ನಿ ಆರೋಗ್ಯವನ್ನು ರಕ್ಷಿಸುತ್ತದೆ. ಹಾಲಿನ ಜೊತೆಗೆ ಅರಿಶಿಣ ಬೆರಸಿ ಕೂಡಿಯುವುದರಿಂದ ರಾತ್ರಿ ಉತ್ತಮ ನಿದ್ದೆಯನ್ನು ಪಡೆಯಬಹುದು.

ಚಕ್ಕೆ: ಬಿಸಿ ಹಾಲಿಗೆ ಕಾಲು ಸ್ಪೂನ್​ ಚಕ್ಕೆ ಪುಡಿ ಜೊತೆಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ನಿದ್ರೆಗೆ ಸಹಾಯ ಆಗುತ್ತದೆ. ಇದರಲ್ಲಿ ಸಮೃದ್ಧ ಆ್ಯಂಟಿ - ಆಕ್ಸಿಡೆಂಟ್​​ಗಳಿದ್ದು, ದೇಹದ ಊರಿಯುತವನ್ನು ಕಡಿಮೆ ಮಾಡುತ್ತದೆ. ಇದು ಕೂಡ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಕಡಿಮೆ ಮಾಡುತ್ತದೆ. ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಇದು ಕೂಡ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಇದರಿಂದ ಅಧಿಕ ತೂಕ ಕಡಿಮೆಯಾಗುತ್ತದೆ.

ಮೆಂತ್ಯೆ: ಒಂದು ಸ್ಪೂನ್​ ಮೆಂತ್ಯೆ ಕಾಳುಗಳನ್ನು ಒಂದು ಕಪ್​ ನೀರಿನಲ್ಲಿ ನೆನಸಿ ಬೆಳಗಿನ ಸಮಯದಲ್ಲಿ ಕುಡಿಯಬಹುದು. ಇದು ಊರಿಯೂತವನ್ನು ತಡೆಗಟ್ಟುವುದರ ಜೊತೆಗೆ, ಅಧಿಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರ ಜೊತೆಗೆ ದಿನಕ್ಕೆ ಐದರಿಂದ ಆರು ಲೀಟರ್​ ನೀರು ಕುಡಿಯುವುದರಿಂದ ದೇಹದ ತ್ಯಾಜ್ಯ ಹೊರಗೆ ಹೋಗಿ ತೂಕವು ನಿಯಂತ್ರಣಕ್ಕೆ ಬರುತ್ತದೆ.

ಇದನ್ನೂ ಓದಿ:ಹುಷಾರಾಗಿ ಚಿಕಿತ್ಸೆ ಪಡೆಯಿರಿ.. ತೂಕ ನಷ್ಟ ಸರ್ಜರಿಯಿಂದ ದಂತಕ್ಷಯದ ಅಪಾಯ ಹೆಚ್ಚು

ABOUT THE AUTHOR

...view details