ಬೆಂಗಳೂರು:ಪೋಷಕರಿಲ್ಲದ, ಅವರಿಂದ ದೂರಾದ ಅಸಂಖ್ಯಾತ ಮಕ್ಕಳ ಪಾಲಿಗೆ ಆಸರೆ ಮತ್ತು ಬೆಂಬಲ ನೀಡುವಲ್ಲಿ ಅನಾಥಾಶ್ರಮಗಳ ಪಾತ್ರ ಹಿರಿದು. ಇಂತಹ ಮಕ್ಕಳು ಪೋಷಕರ ಪ್ರೀತಿ, ಆರೈಕೆಯಿಂದ ದೂರವೇ ಉಳಿದಿರುತ್ತಾರೆ. ಜಗತ್ತಿನಲ್ಲಿ ಅನೇಕ ಮಕ್ಕಳು ಇಂತಹ ಪ್ರೀತಿ, ಸುಸ್ಥಿರ ಬೆಳವಣಿಗೆಗೆ ಪೋಷಕರಿಗಾಗಿ ಕಾದು ಕುಳಿತಿರುತ್ತಾರೆ. ನಮ್ಮನ್ನು ಯಾರಾದರೂ ದತ್ತು ಪಡೆಯುತ್ತಾರೆಯೇ ಎಂಬ ಆಸೆ ಕಂಗಳಲ್ಲಿ ಕಾಯುತ್ತಿರುತ್ತಾರೆ.
ಇಂತಹ ಜಾಗತಿಕ ಅಗತ್ಯತೆ ಗಮನಿಸಿದ ಹ್ಯಾಂಕ್ ಫೋರ್ಟೆನರ್ ಮತ್ತು ಅವರ ತಂಡವು ಅಡಾಪ್ಟ್ ಟುಗೆದರ್ ಎಂಬುದನ್ನು ಸ್ಥಾಪಿಸಿ, 2014ರಲ್ಲಿ ವಿಶ್ವ ದತ್ತು ದಿನ ಆರಂಭಕ್ಕೆ ಕಾರಣರಾದರು. ಲಾಭರಹಿತ ಕ್ರೌಡ್ ಫಂಡಿಂಗ್ ಫ್ಲಾಟ್ಫಾರ್ಮ್ ಆಗಿರುವ ಈ ಅಡಾಪ್ಟ್ ಟುಗೆದರ್ ಮೂಲಕ ಪೋಷಕರಿಗಾಗಿ ಹುಡುಕಾಡುತ್ತಿರುವ ಮತ್ತು ಮಕ್ಕಳಿಗಾಗಿ ಹಂಬಲಿಸುವವರ ನಡುವಿನ ಅಂತರ ಕಡಿಮೆ ಮಾಡಿದರು.
ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಸ್ಥಳೀಯವಾಗಿ ಶೇ.75ರಷ್ಟು ಮಕ್ಕಳನ್ನು ದತ್ತು ಪಡೆಯಲಾಗುವುದು. ಇಲ್ಲಿ ಅಂತರರಾಷ್ಟ್ರೀಯ ದತ್ತು ಪ್ರಮಾಣ ಇಳಿಕೆ ಕಂಡು ಸ್ಥಳೀಯ ಮಕ್ಕಳ ದತ್ತು ಪಡೆಯಲು ಮುಂದಾಗಿದೆ. ದತ್ತು ಪಡೆಯುವಲ್ಲಿ ಖಾಸಗಿ ದತ್ತುಗಳು ಮತ್ತು ಪೋಷಕ ಆರೈಕೆಯ ನಡುವೆ ಸಮಾನ ಭಾಗಗಳಾಗಿ ವಿಂಗಡಿಸಲಾಗಿದೆ.
ಭಾರತದಲ್ಲಿ ದತ್ತು ಪಡೆಯುವಿಕೆ ಪ್ರಮಾಣ: ಭಾರತದಲ್ಲಿ ಅನಾಥ ಮಕ್ಕಳ ದತ್ತು ಪಡೆಯುವಿಕೆಯು ಅನೇಕ ಸವಾಲು ಮತ್ತು ಅವಕಾಶಗಳನ್ನು ಹೊಂದಿದೆ. ದತ್ತು ಪಡೆಯುವಿಕೆ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್ಎ) ನಡೆಸುತ್ತದೆ. ಇದು ದೇಶದೊಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸುವ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ.