ದೇಹದ ತೂಕ ನಷ್ಟವಾದ ಬಳಿಕ ಮತ್ತೆ ತೂಕ ಹೆಚ್ಚಳಗೊಳ್ಳದಂತೆ ಕಾಪಾಡುವುದು ಕೂಡ ಒಂದು ಸವಾಲಿನ ಕೆಲಸ. ಇದಕ್ಕಾಗಿ ಅನೇಕರು ಡಯಟ್ ಮೊರೆ ಹೋದರೆ, ಮತ್ತೆ ಕೆಲವರು ದೈಹಿಕ ಚಟುವಟಿಕೆಗೆ ಆದ್ಯತೆ ನೀಡುತ್ತಾರೆ. ಆದರೆ, ಡಯಟ್ಗಿಂತಲೂ ಹೆಚ್ಚಾಗಿ ದೈಹಿಕ ಚಟುವಟಿಕೆಗಳು ತೂಕ ಕಳೆದುಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಹೊಸ ಅಧ್ಯಯನ ತಿಳಿಸಿದೆ. ಕೊಲರಾಡೊ ವಿಶ್ವವಿದ್ಯಾಲಯದ ಅನ್ಸ್ಚುಟ್ಜ್ ಮತ್ತು ಸ್ವಾಸ್ಥ್ಯ ಕೆಂದ್ರ ಈ ಅಧ್ಯಯನ ನಡೆಸಿದೆ.
ಅಧ್ಯಯನದಲ್ಲಿ ಜನರು ದೀರ್ಘಕಾಲ ತೂಕ ಉಳಿಸಿಕೊಳ್ಳಲು ಏಕೆ ಕಷ್ಟಪಡುತ್ತಾರೆ ಎಂಬುದರ ಕುರಿತು ತಿಳಿಸಲಾಗಿದೆ. ಇಲ್ಲಿ ಯಶಸ್ವಿಯಾಗಿ ತೂಕ ಕಳೆದುಕೊಳ್ಳುವ ಮಂದಿ ಮತ್ತೆ ತೂಕ ಹೆಚ್ಚಳವಾಗದಂತೆ ತಡೆಯಲು ದೈಹಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇವುಗಳ ನಡುವಿನ ಸಂಬಂಧಗಳ ಪುರಾವೆ ಒದಗಿಸಲು ಬದಲಿ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಧ್ಯಯನ ಸ್ಪಷ್ಟಪಡಿಸುತ್ತದೆ ಎಂದು ಡೇನಿಯಲ್ ಒಸ್ಟೆನ್ಡಾರ್ಫ್ ತಿಳಿಸಿದ್ದಾರೆ.
ಯಶಸ್ವಿಯಾಗಿ ತೂಕ ನಷ್ಟಕ್ಕೆ ಒಳಗಾದವರು ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಶಕ್ತಿ, ಸಮತೋಲನವನ್ನು ಕಾಪಾಡುವುದರೊಂದಿಗೆ ಮತ್ತೆ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುತ್ತಾರೆ. ಅಧ್ಯಯನಲ್ಲಿ ಯಶಸ್ವಿ ತೂಕ ನಷ್ಟ ಎಂದರೆ ವ್ಯಕ್ತಿಯೊಬ್ಬರು ಒಂದು ವರ್ಷದವರೆಗೆ 30 ಪೌಂಡ್ ಅಥವಾ ಅದಕ್ಕಿಂತ ಹೆಚ್ಚು ಕಡಿಮೆ ದೇಹದ ತೂಕ ನಿರ್ವಹಣೆ ಮಾಡುವುದಾಗಿದೆ.