ಕರ್ನಾಟಕ

karnataka

ಜಾಗತಿಕ ತಾಪಮಾನ: ಯುಎಸ್​ ಓಪನ್ ಟೆನಿಸ್​ ಟೂರ್ನಿ ವೇಳೆ ಭಾರತ ಮೂಲದ ವ್ಯಕ್ತಿಯಿಂದ ಪ್ರತಿಭಟನೆ

By ETV Bharat Karnataka Team

Published : Sep 11, 2023, 11:15 AM IST

ಜಾಗತಿಕ ತಾಪಮಾನ ಹೆಚ್ಚಳ ಕುರಿತು ಜಗತ್ತು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ಭಾರತೀಯ ಮೂಲದ ವ್ಯಕ್ತಿ ತಿಳಿಸಿದ್ದಾರೆ.

An Indian-origin man protested at the US Open to highlight global warming
An Indian-origin man protested at the US Open to highlight global warming

ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಪರಿಸರ ತಜ್ಞರು ಸೇರಿದಂತೆ ವಿಜ್ಞಾನಿಗಳು ಜಗತ್ತಿಗೆ ಎಚ್ಚರಿಕೆ ಮೂಡಿಸುತ್ತಲೇ ಇದ್ದಾರೆ. ಇದೀಗ, ಹವಾಮಾನ ಬದಲಾವಣೆ ಕುರಿತು ಭಾರತ ಮೂಲದ ವ್ಯಕ್ತಿಯೊಬ್ಬರು ಯುಎಸ್​ ಓಪನ್​ ಟೆನಿಸ್​ ಟೂರ್ನಿಯಲ್ಲಿ ವಿಭಿನ್ನ ರೀತಿಯಲ್ಲಿ ಜಗತ್ತಿನ ಗಮನ ಸೆಳೆಯಲು ಮುಂದಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಏನಿದು ಘಟನೆ?: ಯುಎಸ್​ ಓಪನ್​ ಟೂರ್ನಿಯ ಸಂದರ್ಭದಲ್ಲಿ ಜಗತ್ತಿಗೆ ಹವಾಮಾನ ಬದಲಾವಣೆ ಕುರಿತು ಜಗತ್ತಿನ ಜನರ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಒಳನುಗ್ಗಿ ಅರ್ಧ ಗಂಟೆ ಹೈಡ್ರಾಮ ನಡೆಸಿದ ಪ್ರಸಂಗ ನಡೆಯಿತು.

ಸೆಪ್ಟೆಂಬರ್​ 7ರಂದು ಅಮೆರಿಕದ ಕೊಕೊ ಗೌಪ್​ ಮತ್ತು ಜೆಕ್​ ಕರೋಲಿಯಾ ಮುಚೋವಾ ನಡುವಿನ ವೇಳೆ ಪಂದ್ಯಾವಳಿಯಲ್ಲಿ ಈ ಅಡ್ಡಿಯುಂಟಾಗಿದೆ. ಪಂದ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಭಾರತದ ಮೂಲದ ಸಯಕ್​ ಮುಖೋಪಾಧ್ಯಾಯ ಎಂದು ಗುರುತಿಸಲಾಗಿದೆ. 50 ವರ್ಷದ ಮುಖ್ಯೋಪಾಧ್ಯಾಯರನ್ನು ಇದೀಗ ಬಂಧಿಸಲಾಗಿದೆ.

ಕ್ರೀಡೆ ನಡೆಯುತ್ತಿದ್ದ ಸಂದರ್ಭದಲ್ಲಿ ಶೂ ಬಿಚ್ಚಿ ಅಂಗಣಕ್ಕೆ ಜಿಗಿದ ಮುಖ್ಯೋಪಾಧ್ಯಾಯ No Tennis On A Dead Planet (ಸತ್ತ ಗ್ರಹದಲ್ಲಿ ಟೆನಿಸ್​ ಇಲ್ಲ) End fossil fuels (ಪಳೆಯುಳಿಕೆ ಇಂಧನಗಳನ್ನು ಕೊನೆಗೊಳಿಸಿ) ಎಂದು ಘೋಷಣೆ ಕೂಗಿದರು. ತಕ್ಷಣ ಪೊಲೀಸರು ಆಗಮಿಸಿ ಅವರನ್ನು ಎಳೆದೊಯ್ಯುವ ಯತ್ನ ನಡೆಸಿದರು. ಇದರಿಂದ ಪಂದ್ಯಕ್ಕೆ 50 ನಿಮಿಷ ಅಡ್ಡಿಯುಂಟಾಯಿತು.

ನ್ಯೂಯಾರ್ಕ್​ ಟೈಮ್ಸ್​​ಗೆ ಮಾತನಾಡಿರುವ ಅವರು, ಹವಾಮಾನ ಬದಲಾವಣೆ ಕುರಿತು ಬರೆಯುವುದು, ಲಾಬಿ ಮಾಡುವುದು ಸೇರಿದಂತೆ ಅನೇಕ ಪ್ರಯತ್ನಗಳನ್ನು ನಡೆಸಿದ್ದೇನೆ. ಆದರೆ, ಇದ್ಯಾವುದೂ ಅಷ್ಟು ಪರಿಣಾಮಕಾರಿಯಾಗಿಲ್ಲ. ವಸ್ತು ಸಂಗ್ರಹಾಲಯ, ಕ್ರೀಡೆಯಂತಹ ಸಾರ್ವಜನಿಕ ಸಂಸ್ಥೆಗಳಿಗೆ ನೇರವಾಗಿ ಹೋಗುವುದರಿಂದ ಹೆಚ್ಚು ಗಮನ ಸೆಳೆಯಬಹುದು ಎಂದರು.

ಯುಎಸ್​ ಓಪನ್​ ಗೆದ್ದ ಗುಫ್​​ ಕೂಡ ಶಾಂತಿಯುತ ಮಾರ್ಗದಲ್ಲಿ ಸಂದೇಶ ಸಾರಿದ್ದಾರೆ. ತಾವೂ ಕೂಡ ಹವಾಮಾನ ಬದಲಾವಣೆ ಆಗುತ್ತಿರುವುದನ್ನು ನಂಬುತ್ತೇವೆ ಎಂದು ತಿಳಿಸಿದರು. ನಿಯಮ ಉಲ್ಲಂಘನೆ ಮೇರೆಗೆ ಮುಖ್ಯೋಪಾಧ್ಯಯ​ರನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್​​ಗೆ ಗಮನಕ್ಕೆ ತಂದ ಬಳಿಕ ಅವರನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

25 ವರ್ಷದ ಹಿಂದೆ ಭಾರತ ಬಿಟ್ಟು ನ್ಯೂಯಾರ್ಕ್​ಗೆ ಬಂದಿರುವ ಮುಖ್ಯೋಪಾಧ್ಯಾಯ, ಅಭಿವೃದ್ಧಿ ಹೊಂದಿದ ದೇಶಗಳು ಹೊರಸೂಸುತ್ತಿರುವ ಇಂಗಾಲದಿಂದಾಗಿ ಭಾರತವೂ ಕೂಡ ಹವಾಮಾನ ಬದಲಾವಣೆಗೆ ಒಳಗಾಗಿ ಭಾರಿ ಬೆಲೆ ತೆರುತ್ತಿದೆ ಎಂದರು.

ಇದೆ ವೇಳೆ ಹವಾಮಾನ ಬದಲಾವಣೆ ಬಗ್ಗೆ ಜಗತ್ತಿನ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ನಡೆಯುತ್ತಿದ್ದು, ಪಳೆಯುಳಿಕೆ ಇಂಧನವನ್ನು ಕೊನೆಗೊಳಿಸುವಂತೆ ಅವರು ಒತ್ತಾಯಿಸಿದರು. (ಐಎಎನ್‌ಎಸ್)

ಇದನ್ನೂ ಓದಿ: ಕರಗಲಿವೆ ಹಿಮನದಿಗಳು, ಏರಿಕೆಯಾಗಲಿದೆ ಸಮುದ್ರ ಮಟ್ಟ: ವಿಶ್ವಕ್ಕೆ ವಿಜ್ಞಾನಿಗಳ ಎಚ್ಚರಿಕೆ!

ABOUT THE AUTHOR

...view details