ಕರ್ನಾಟಕ

karnataka

ಯಾದಗಿರಿ: ಬೆಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

By

Published : Sep 24, 2020, 11:17 AM IST

ಯಾದಗಿರಿಯಲ್ಲಿ ಮಳೆಯಿಂದ ಉಂಟಾದ ಬೆಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಭೇಟಿ ನೀಡಿ, ವೀಕ್ಷಣೆ ಮಾಡಿದರು.

Dc
Dc

ಯಾದಗಿರಿ: ಜಿಲ್ಲೆಯ ವಡ್ನಳ್ಳಿ, ಯರಗೋಳ, ವಡಗೇರಾ, ತಾಲೂಕಿನಲ್ಲಿ ಮಳೆಯಿಂದ ಉಂಟಾದ ಬೆಳೆಹಾನಿಯನ್ನು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ವೀಕ್ಷಣೆ ಮಾಡಿದರು.

ನಂತರ ಮಾತನಾಡಿದ ಅವರು, ವಡ್ನಳ್ಳಿ ಗ್ರಾಮದ ರೈತರ ಕೃಷಿ ಭೂಮಿಗೆ ಹಳ್ಳದ ನೀರು ನುಗ್ಗಿ ಹೆಸರು ಮತ್ತು ಹತ್ತಿ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಜಲಾವೃತವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಕುರಿತು ಸರ್ವೇ ಮಾಡಿ, ರೈತರಿಗೆ ಬೆಳೆ ಪರಿಹಾರ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಯರಗೋಳ ಗ್ರಾಮದ ದೊಡ್ಡ ಕೆರೆ ಸಮೀಪವಿರುವ ಜಮೀನಿಗೆ ಕೆರೆ ನೀರು ನುಗ್ಗಿ, ಹತ್ತಿ ಮತ್ತು ತೊಗರಿ ಬೆಳೆ ಹಾಳಾಗಿದ್ದು, ಅತಿ ವೇಗವಾಗಿ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಬೆಳೆಹಾನಿ ಪರಿಹಾರ ಕೊಡಿಸಬೇಕು. ಜೊತೆಗೆ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆ ಹಾನಿಯಾಗಿದೆ. ರೈತರಿಗೆ ಬೆಳೆ ವಿಮೆ ಬಗ್ಗೆ ಮತ್ತು ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡುವ ಬೋರ್ಡ್ ಹಾಕಿಸಬೇಕು ಎಂದರು.

ಯಾದಗಿರಿ ತಾಲೂಕಿನಲ್ಲಿ 52 ಸಾವಿರ ಹತ್ತಿ ಹಾಗೂ 23 ಸಾವಿರ ಎಕರೆ ಪ್ರದೇಶದಲ್ಲಿಹತ್ತಿ ಬೆಳೆಯಲಾಗಿದೆ. ಹಾನಿಯಾದ ಬೆಳೆಗಳ ಸರ್ವೇ ಕಾರ್ಯ ಶೇ. 35ರಷ್ಟು ಮುಗಿದಿದೆ. ಸರ್ವೇ ಕಾರ್ಯವನ್ನು ಇನ್ನು ಒಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ABOUT THE AUTHOR

...view details