ಕರ್ನಾಟಕ

karnataka

ಸುರಪುರದಲ್ಲಿ ಪ್ರವಾಹ ಭೀತಿ: ಡಂಗೂರ ಸಾರುವ ಮೂಲಕ ಮುನ್ಸೂಚನೆ

By

Published : Aug 7, 2020, 11:09 PM IST

ಸುರಪುರ ತಾಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ತಿಂಥಣಿ, ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ, ಎಮ್ಮಡಗಿ, ಸೂಗೂರು ಸೇರಿದಂತೆ ಅನೇಕ ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ.

ಸುರಪುರದಲ್ಲಿ ಪ್ರವಾಹ ಭೀತಿ
ಸುರಪುರದಲ್ಲಿ ಪ್ರವಾಹ ಭೀತಿ

ಸುರಪುರ: ಪ್ರವಾಹದ ಭೀತಿ ಹಿನ್ನೆಲೆ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ತಾಲೂಕು ಆಡಳಿತ ಡಂಗೂರ ಸಾರುವ ಮೂಲಕ ಜನರಿಗಡ ಮುನಸೂಚನೆ ನೀಡುತ್ತಿದೆ.

ಮಹಾರಾಷ್ಟ್ರ ಮತ್ತು ಬೆಳಗಾವಿ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಆಲಮಟ್ಟಿ ಜಲಾಶಯ ಭರ್ತಿಯಾಗಿ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಕೃಷ್ಣಾ ನದಿಗೆ ಸುಮಾರು 1 ಲಕ್ಷ 80 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಡಂಗೂರ ಸಾರುವ ಮೂಲಕ ಮುನ್ಸೂಚನೆ

ಸುರಪುರ ತಾಲೂಕಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ತಿಂಥಣಿ, ದೇವಾಪುರ, ಶೆಳ್ಳಗಿ, ಮುಷ್ಠಳ್ಳಿ, ಎಮ್ಮಡಗಿ, ಸೂಗೂರು ಸೇರಿದಂತೆ ಅನೇಕ ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ. ಯಾವುದೇ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿ ಬಿಡಲಾಗುವುದರಿಂದ ನದಿ ಪಾತ್ರದ ಗ್ರಾಮದಲ್ಲಿನ ಜನರು ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕಾಡಳಿತದಿಂದ ಪ್ರತಿ ಗ್ರಾಮಗಳಲ್ಲಿ ಲೌಡ್ ಸ್ಪೀಕರ್​ಗಳ ಮೂಲಕ ಮತ್ತು ಡಂಗೂರ ಸಾರುತ್ತ ಮುನ್ಸೂಚನೆ ನೀಡಲಾಗುತ್ತಿದೆ.

ABOUT THE AUTHOR

...view details