ಕರ್ನಾಟಕ

karnataka

ಚರಬಸವೇಶ್ವರ ತಾತನವರ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಜಾನುವಾರುಗಳ ಜಾತ್ರೆ

By

Published : Apr 12, 2022, 10:27 AM IST

Updated : Apr 12, 2022, 12:44 PM IST

ಜಿಲ್ಲೆಯ ಶಹಾಪುರ ನಗರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಚರಬಸವೇಶ್ವರ ತಾತನವರ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಜಾನವಾರುಗಳ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ. ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಈ ಜಾತ್ರೆಯು ಕಳೆದೆರಡು ವರ್ಷಗಳಿಂದ ಕೊರೊನಾದಿಂದಾಗಿ ಸ್ಥಗಿತಗೊಂಡಿತ್ತು. ಈ ವರ್ಷ ಕೋವಿಡ್ ಪ್ರಕರಣಗಳು ಇಳಿಮುಖವಾಗಿರುವುದರಿಂದ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

cattle-fair-that-has-attracted-people-in-yadagiri
ಚರಬಸವೇಶ್ವರ ತಾತನವರ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಜಾನುವಾರುಗಳ ಜಾತ್ರೆ

ಯಾದಗಿರಿ : ರಾಜ್ಯ ಸರ್ಕಾರ ಕೋವಿಡ್‌ ನಿಬಂಧನೆ ಸಡಿಲಗೊಳಿಸಿದ್ದರಿಂದ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಚರಬಸವೇಶ್ವರ ತಾತನವರ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಜಾನುವಾರುಗಳ ಪ್ರದರ್ಶನ ಜನರನ್ನು ಆಕರ್ಷಿಸಿದೆ. ಸದ್ಯ ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಬಿಡುವು ಸಿಕ್ಕಿದ್ದು, ಹಲವು ಜಿಲ್ಲೆಗಳ ನಾನಾ ಭಾಗಗಳಿಂದ ರೈತರು ರಾಸುಗಳನ್ನು ಪ್ರದರ್ಶನಕ್ಕೆ ಬರುತ್ತಿದ್ದಾರೆ. 7 ದಿನಗಳವರೆಗೆ ನಡೆಯುವ ದನಗಳ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಬರುತ್ತವೆ.

ಚರಬಸವೇಶ್ವರ ತಾತನವರ ಜಾತ್ರೆಯಲ್ಲಿ ಜನರ ಕಣ್ಮನ ಸೆಳೆದ ಜಾನುವಾರುಗಳ ಜಾತ್ರೆ

ಸಗರನಾಡಿನ ಆರಾಧ್ಯದೈವ ನಗರದ ಗದ್ದುಗೆ ಸಂಸ್ಥಾನದ ಮೂಲಪುರುಷ ಚರಬಸವ ತಾತನವರು ಲಿಂಗೈಕ್ಯರಾಗಿ ಶತಮಾನ ಗತಿಸಿದೆ. ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಈ ಜಾತ್ರೆಯು ಕಳೆದೆರಡು ವರ್ಷಗಳಿಂದ ಕೊರೊನಾದಿಂದಾಗಿ ಸ್ಥಗಿತಗೊಂಡಿತ್ತು. ಈ ವರ್ಷ ಕೋವಿಡ್ ಪ್ರಕರಣಗಳು ಇಳಿಮುಖವಾಗಿರುವುದರಿಂದ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಮದುಮಗನಂತೆ ಶೃಂಗಾರಗೊಂಡ ರಾಸುಗಳು: ಜಾತ್ರೆಯಲ್ಲಿ ಭಾಗವಹಿಸುವ ಎತ್ತುಗಳಿಗೆ ಮದುಮಗನಂತೆ ಶೃಂಗಾರಗೊಳಿಸಲಾಗುತ್ತದೆ. ಈ ರಾಸುಗಳ ಶೃಂಗಾರವನ್ನು ನೋಡುವುದೇ ಕಣ್ಣಿಗೆ ಹಬ್ಬ. ವಿವಿಧ ಜಿಲ್ಲೆಗಳ ನಾನಾ ಭಾಗಗಳಿಂದ ರೈತರು ತಮ್ಮ ರಾಸುಗಳನ್ನು ಜಾತ್ರೆಗೆ ಕರೆತರುತ್ತಾರೆ.

ವಿವಿಧ ಬಗೆಯ ರಾಸುಗಳು ಭಾಗಿ: ಜಾತ್ರೆಯಲ್ಲಿ ಜವಾರಿ, ಕಿಲಾರಿ, ಮೈಸೂರು, ದೇವಣಿ ಸೇರಿದಂತೆ ವಿವಿಧ ಬಗೆಯ ರಾಸುಗಳನ್ನು ಕಾಣಬಹುದು. ಈ ಜಾತ್ರೆಯನ್ನು ನೋಡಲು ಯಾದಗಿರಿ, ರಾಯಚೂರು, ಕಲಬುರಗಿ, ಗದಗ, ವಿಜಯಪುರ, ಬಾಗಲಕೋಟೆ ಸೇರಿದಂತೆ ನೆರೆ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ಜನರು ಈ ದನಗಳ ಜಾತ್ರೆಗೆ ಆಗಮಿಸುತ್ತಾರೆ. ಜಾತ್ರೆಯಲ್ಲಿ ಎತ್ತುಗಳ ಕೊಡುಕೊಳ್ಳುವಿಕೆ ನಡೆಯುತ್ತದೆ. ಕನಿಷ್ಠ ಒಂದು ಎತ್ತಿನ ಬೆಲೆ 30 ಸಾವಿರದಿಂದ ಎರಡು ಲಕ್ಷಗಳವರೆಗೆ ಮಾರಾಟವಾಗುತ್ತವೆ. ಜಾತ್ರೆಗೆ ಆಗಮಿಸಿದ ಜನರು ಉತ್ತಮ ಎತ್ತುಗಳನ್ನು ಕೊಳ್ಳಲು ಇಚ್ಛೆಪಡುತ್ತಾರೆ.

ಜಾತ್ರೆಗೆ ಆಗಮಿಸುವ ಜಾನುವಾರುಗಳಿಗೆ ನೀರಿನ ಸೌಕರ್ಯ ಹಾಗೂ ಜಾತ್ರೆಗೆ ಆಗಮಿಸಿದ ಜನರಿಗೆ ಶ್ರೀಮಠದಲ್ಲಿ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ. ರಾಸುಗಳ ಮಾರಾಟ ಮಾಡಲು ಬಂದಿರುವ ವ್ಯಾಪಾರಿಗಳಿಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಶ್ರೀಮಠದ ಸ್ವಾಮೀಜಿ ತಿಳಿಸಿದ್ದಾರೆ.

ಕೃಷಿ ಪರಿಕರ ಭರ್ಜರಿ ವ್ಯಾಪಾರ: ಜಾತ್ರೆಯಲ್ಲಿ ಕೃಷಿಗೆ ಬೇಕಾಗುವ ಪರಿಕರಗಳ ಮಾರಾಟವು ಭರ್ಜರಿಯಾಗಿ ನಡೆಯುತ್ತದೆ. ರೈತರು ಕೃಷಿಗೆ ಬೇಕಾದ ಸಾಮಗ್ರಿಗಳನ್ನು ಇಲ್ಲಿಂದ ಖರೀದಿಸುತ್ತಿದ್ದಾರೆ. ರೈತರ ಕೃಷಿಗೆ ಬೇಕಾಗುವ ಹಗ್ಗ, ಎತ್ತುಗಳಿಗೆ ಕಟ್ಟುವ ಬಣ್ಣ ಬಣ್ಣದ ಗೊಂಡೆಗಳು, ಬಾರಕೋಲು ಸೇರಿದಂತೆ ಬಿದಿರು ಬುಟ್ಟಿಗಳು, ಸದೆ ತೆಗೆಯುವ ಕಬ್ಬಿಣದ ಪರಿಕರಗಳು ಎಲ್ಲಾ ರೀತಿಯ ವಸ್ತುಗಳು ಜಾತ್ರೆಯಲ್ಲಿ ದೊರೆಯುತ್ತದೆ.

ಓದಿ :ಹಿಂದಿ ಹೇರಿಕೆ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

Last Updated : Apr 12, 2022, 12:44 PM IST

ABOUT THE AUTHOR

...view details