ಕರ್ನಾಟಕ

karnataka

ಕಣ್ಣೀರು ಹಾಕುತ್ತಲೇ ಸೈನಿಕರ ಶೌರ್ಯ ಪ್ರಶಂಸಿದ ಯೋಧನ ಪತ್ನಿ

By

Published : Apr 3, 2021, 7:52 PM IST

ಎಷ್ಟೋ ಬಾರಿ ಸೇನೆಯಲ್ಲಿರುವವರ ಜೊತೆ ಬದುಕು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಯೋಧರಲ್ಲೂ ಭಾವನೆಗಳಿದ್ದು, ಜೀವವನ್ನೇ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವವರಿಗೆ ಬಲ ತುಂಬುವ ಕೆಲಸ ಆಗಬೇಕು..

soldier-wife-appreciated-the-bravery-soldiers-while
ಸೈನಿಕರ ಶೌರ್ಯ ಪ್ರಶಂಸಿದ ಯೋಧನ ಪತ್ನಿ

ಮುದ್ದೇಬಿಹಾಳ :ಯೋಧನನ್ನು ಮದುವೆಯಾಗಬೇಕು ಎಂಬುದು ನನ್ನ ಮಹದಾಸೆಯಾಗಿತ್ತು. ಆದರೆ, ಹಲವು ಸಂದರ್ಭಗಳಲ್ಲಿ ಆತಂಕದ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಇಂದು ಪತಿ ಮರಳಿ ತವರಿಗೆ ವಾಪಸ್ಸಾಗಿರುವುದು ಖುಷಿ ತಂದಿದೆ.

ಜನರು ಪ್ರೀತಿಯಿಂದ ಮಾತನಾಡಿಸಿ ಗೌರವದಿಂದ ಕಂಡಾಗ ಕಣ್ತುಂಬಿ ಬರುತ್ತಿದೆ ಎಂದು ನಡಹಳ್ಳಿ ಗ್ರಾಮದ ಯೋಧ ಹಣಮಂತ್ರಾಯ ಬಿರಾದಾರ್ ಅವರ ಪತ್ನಿ ಶೋಭಾ ಬಿರಾದಾರ್ ಹೇಳಿದರು.

ಸೈನಿಕರ ಶೌರ್ಯ ಪ್ರಶಂಸಿದ ಯೋಧನ ಪತ್ನಿ

ಓದಿ: ಕೆಎಸ್​ಬಿಸಿ ವಿರುದ್ಧ ಆರೋಪ: ಸಿಡಿ ಲೇಡಿ ಪರ ವಕೀಲ ಮಂಜುನಾಥ್​ ಸನ್ನದು ಅಮಾನತು, ಜಗದೀಶ್​ಗೂ ಸಂಕಷ್ಟ

ಪಟ್ಟಣದ ಸೈನಿಕ ಮೈದಾನದಲ್ಲಿ ಮಹಿಳಾ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸೈನ್ಯಕ್ಕೆ ಹೋದ ಯೋಧರು ಜೀವಂತವಾಗಿ ವಾಪಸ್ಸಾಗುವುದು ಕಷ್ಟಸಾಧ್ಯ.

ಹೀಗಾಗಿ, ಎಷ್ಟೋ ಬಾರಿ ಸೇನೆಯಲ್ಲಿರುವವರ ಜೊತೆ ಬದುಕು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಯೋಧರಲ್ಲೂ ಭಾವನೆಗಳಿದ್ದು, ಜೀವವನ್ನೇ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವವರಿಗೆ ಬಲ ತುಂಬುವ ಕೆಲಸ ಆಗಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ ಪೀರಾಪೂರ ಮಾತನಾಡಿ, ಬಡವರ ಮನೆಯ ಮಕ್ಕಳಷ್ಟೇ ಸೈನ್ಯಕ್ಕೆ ಸೇರುತ್ತಾರೆ ಎಂಬ ಮಾತಿದೆ. ಆದರೆ, ದೇಶ ಸೇವೆಯ ವಿಷಯ ಬಂದಾಗ ರಾಜಕಾರಣಿಗಳ ಮಕ್ಕಳೂ ಸೇನೆಗೆ ಸೇರಿದರೆ ಅದರ ಮಹತ್ವ ಹೆಚ್ಚುತ್ತದೆ. ಹುತಾತ್ಮರಾದಾಗ ಕೊಡುವ ಗೌರವವವನ್ನ ಸೇನೆಯಲ್ಲಿ ಸೇವೆ ಸಲ್ಲಿಸಿ ಹಿಂದುರುಗಿದಾಗ ಅವರನ್ನು ಸನ್ಮಾನಿಸಿ ಗೌರವ ನೀಡುವ ಕಾರ್ಯ ಬೆಳೆದು ಬರಬೇಕಿದೆ ಎಂದರು.

ನಿವೃತ್ತರಾಗಿ ತವರಿಗೆ ಆಗಮಿಸಿದ ನಡಹಳ್ಳಿಯ ಹಣಮಂತ್ರಾಯ ಬಿರಾದಾರ ಮಾತನಾಡಿ, ಸೇನೆಗೆ ಸೇರುವ ಮೂಲಕ ಭಾರತಾಂಬೆಯ ಸೇವೆ ಸಲ್ಲಿಸುವ ಕೆಲಸ ಆಗಬೇಕು. ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಮುಖಂಡರಾದ ಬಸವರಾಜ ನಂದಿಕೇಶ್ವರಮಠ, ಜಗನ್ನಾಥ ಗೌಳಿ ಮಾತನಾಡಿದರು.

ABOUT THE AUTHOR

...view details