ಕರ್ನಾಟಕ

karnataka

ವಿಜಯಪುರ : ಕೋವಿಡ್​ ಮಧ್ಯೆಯೂ ಅದ್ದೂರಿಯಾಗಿ ನಡೆದ ಶ್ರೀ ಸಿದ್ಧೇಶ್ವರ ಜಾತ್ರೆ

By

Published : Jan 14, 2022, 6:43 PM IST

siddheshwara-grand-fair-festival-celebration
ಕೋವಿಡ್​ ಮಧ್ಯೆಯೂ ಅದ್ದೂರಿಯಾಗಿ ನಡೆದ ಸಿದ್ಧೇಶ್ವರ ಜಾತ್ರೆ

ಇಂದು ಬೆಳಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪೂಜೆ ನೆರವೇರಿಸಿದರೆ, ನಂತರ ಧಾರ್ಮಿಕ ವಿಧಿ-ವಿಧಾನಗಳನ್ನು ಅವರ ಪುತ್ರ ರಾಮನಗೌಡ ಪಾಟೀಲ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಸಿದ್ಧೇಶ್ವರ ದೇವರ ದರ್ಶನ ಪಡೆದರು. ಸಾಲು ಸಾಲು ಕ್ಯೂನಲ್ಲಿ ನಿಂತು ಭಕ್ತರು ದರ್ಶನ ಪಡೆದರು..

ವಿಜಯಪುರ :ಉತ್ತರ ಕರ್ನಾಟಕದ ಐತಿಹಾಸಿಕ ಶ್ರೀ ಸಿದ್ದೇಶ್ವರ ಜಾತ್ರೆ ಕೊರೊನಾದಿಂದ ರದ್ದಾಗಿದ್ದರೂ ಸಹ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ಕೋವಿಡ್​ ಮಧ್ಯೆಯೂ ಅದ್ದೂರಿಯಾಗಿ ನಡೆದ ಶ್ರೀ ಸಿದ್ಧೇಶ್ವರ ಜಾತ್ರೆ..

ಕಳೆದ ಎರಡು ವರ್ಷಗಳಿಂದ ಕೋವಿಡ್​ ಜಾತ್ರೆ ಆಚರಣೆ ಆಗಿಲ್ಲ. ಈ ವರ್ಷವೂ ಸಹ ಕೊರೊನಾ 3ನೇ ಅಲೆಯಿಂದ ಸಿದ್ಧೇಶ್ವರ ಜಾತ್ರಾ ಕಮಿಟಿ ಪ್ರತಿ ಮಕರ ಸಂಕ್ರಾಂತಿ ದಿನ ಆಚರಿಸುವ ಶ್ರೀ ಸಿದ್ಧೇಶ್ವರ ಜಾತ್ರೆಯನ್ನು ರದ್ದುಗೊಳಿಸಿತ್ತು.

ಅದರ ಬದಲಿಗೆ ಪ್ರತಿ ವರ್ಷ ನಡೆಯುವ ನಂದಿಕೋಲ ಉತ್ಸವ, ಧಾರ್ಮಿಕ ಆಚರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ಇಂದು ಮಕರ ಸಂಕ್ರಾಂತಿ‌ ಕಾರಣ ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿದ್ದ ಭಕ್ತರು ಶ್ರೀ ಸಿದ್ಧೇಶ್ವರ ದೇವರ ದರ್ಶನ ಪಡೆದು ಪುನೀತರಾದರು.

ಇಂದು ಬೆಳಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪೂಜೆ ನೆರವೇರಿಸಿದರೆ, ನಂತರ ಧಾರ್ಮಿಕ ವಿಧಿ-ವಿಧಾನಗಳನ್ನು ಅವರ ಪುತ್ರ ರಾಮನಗೌಡ ಪಾಟೀಲ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಸಿದ್ಧೇಶ್ವರ ದೇವರ ದರ್ಶನ ಪಡೆದರು. ಸಾಲು ಸಾಲು ಕ್ಯೂನಲ್ಲಿ ನಿಂತು ಭಕ್ತರು ದರ್ಶನ ಪಡೆದರು.

ವಿವಿಧ ಹೂಗಳ ಅಲಂಕಾರದಿಂದ ಸಿದ್ಧೇಶ್ವರ ದೇವರನ್ನು ಅಲಂಕರಿಸಲಾಗಿತ್ತು. ಪಲ್ಲಕ್ಕಿಯನ್ನು ಅಲಂಕರಿಸಿ ಶಾಸಕರ ಪುತ್ರ ರಾಮನಗೌಡ ಪಾಟೀಲ ವಿಶೇಷ ಪೂಜೆಯಲ್ಲಿ ಕುಳಿತು ಸಹಸ್ರನಾಮದೊಂದಿಗೆ ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ನಂತರ ನಂದಿ ಕೋಲ ಉತ್ಸವ ಸಹ ಸಂಭ್ರಮದಿಂದ ಆರಂಭವಾಯಿತು. ದೇವಸ್ಥಾನದ ಭಕ್ತರು ನಂದಿಕೋಲವನ್ನು ಹೊತ್ತು ಮೆರವಣಿಗೆ ನಡೆಸಿದರು. ಸಿದ್ಧೇಶ್ವರ ಜಾತ್ರೆ ರದ್ದು ಎನ್ನುವ ಸಂದೇಶ ಮೊದಲೇ ರವಾನೆ ಆದ ಕಾರಣ ಭಕ್ತರು ಸಾಧ್ಯವಾದಷ್ಟು ಬೇಗ ದೇವರ ದರ್ಶನ ಪಡೆದು ತಮ್ಮ ಮನೆಗೆ ತೆರಳಿದರು.

ಓದಿ:ಮೈಸೂರು: ಆಸ್ತಿ ವಿಚಾರಕ್ಕೆ ಗಲಾಟೆ, ಮಹಿಳೆಯ ಬರ್ಬರ ಹತ್ಯೆ

TAGGED:

ABOUT THE AUTHOR

...view details