ಕರ್ನಾಟಕ

karnataka

ಕಾಲ್​ ಡಿಟೈಲ್ಸ್​​ ಸಂಗ್ರಹ ಆರೋಪ: ಡಿಜಿಪಿಗೆ ಎಂ.ಬಿ.ಪಾಟೀಲ್​ ದೂರು

By

Published : Mar 13, 2023, 2:24 PM IST

ತಮ್ಮ​ ಹಾಗೂ ಕುಟುಂಬದವರ ಕಾಲ್​ ಡಿಟೇಲ್ಸ್​​ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಎಂ.ಬಿ.ಪಾಟೀಲ್ ದೂರು ಸಲ್ಲಿಸಿದ್ದಾರೆ.

MB Patil
ಎಂ.ಬಿ.ಪಾಟೀಲ

ವಿಜಯಪುರ: ನನ್ನ ಹಾಗೂ ನನ್ನ ಕುಟುಂಬ, ಆಪ್ತರ ಕಾಲ್​ ಡಿಟೇಲ್ಸ್​​ ಯಾರಿಗೂ ನೀಡಬಾರದೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ದೂರಿನಲ್ಲೇನಿದೆ?:"ನನ್ನ ಕ್ಷೇತ್ರ ಬಬಲೇಶ್ವರದಲ್ಲಿ ಕೆಲವರು ದುರುದ್ದೇಶದಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ಇತರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ವಿರೋಧಿಗಳು ಈ ಕೃತ್ಯ ಮಾಡುತ್ತಿದ್ದಾರೆ. ನನ್ನ ಮೊಬೈಲ್ ಕರೆ ಮಾಹಿತಿ, ನನ್ನ ಪತ್ನಿ ಆಶಾ ಪಾಟೀಲ್, ಸಹೋದರ ಹಾಗೂ ಪರಿಷತ್ ಸದಸ್ಯ ಸುನಿಲ ಗೌಡ ಪಾಟೀಲ್, ಪುತ್ರ ಬಸನಗೌಡ ಪಾಟೀಲ್ ಹಾಗೂ ಬಿಎಲ್​​ಡಿಇ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಇದು ವೈಯಕ್ತಿಕ ಮಾಹಿತಿ ಕಸಿಯುವ ಯತ್ನ" ಎಂದು ಉಲ್ಲೇಖಿಸಿದ್ದಾರೆ.

ನಮ್ಮೆಲ್ಲರ ಕಾಲ್ ಹಿಸ್ಟರಿಗಳನ್ನು ಯಾರಿಗೂ ನೀಡದಂತೆ ಸಂಬಂಧಿಸಿದ ಸಿಮ್ ಏಜೆನ್ಸಿ ಹಾಗೂ ಪೊಲೀಸ್ ಇಲಾಖೆಯವರಿಗೆ ಕಟ್ಟುನಿಟ್ಟಾಗಿ ಸೂಚಿಸಲು ದೂರಿನಲ್ಲಿ ಒತ್ತಾಯಿಸಲಾಗಿದೆ.‌ ಒಂದು ವೇಳೆ ನೀಡಿದರೆ ಅದಕ್ಕೆ ಏಜೆನ್ಸಿ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಹೊಣೆ ಎಂದು ಎಂದು ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಗರ ವಿವಾದ ನಮಗೆ ಪ್ಲಸ್‌ ಪಾಯಿಂಟ್‌, ಮುಂದಿನ ಎಲೆಕ್ಷನ್‌ನಲ್ಲಿ 140 ಸ್ಥಾನ: ಎಂ.ಬಿ.ಪಾಟೀಲ್‌

'ಕಾಂಗ್ರೆಸ್‌ ಪಕ್ಷ ಐಸಿಯುನಲ್ಲಿದೆ': ಅಧಿಕಾರಕ್ಕೇರುವ ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿಯೇ ಐಸಿಯುನಲ್ಲಿದೆ. ಚುನಾವಣೆ ಮುಗಿಯುವ ಹೊತ್ತಿಗೆ ಹೊರಗಡೆ ಬರದಂತಹ ಸ್ಥಿತಿಗೆ ತಲುಪುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ವ್ಯಂಗ್ಯ‌ವಾಡಿದ್ದಾರೆ. ಇತ್ತೀಚೆಗೆ ಸಿಂದಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ್ದ ಅವರು, ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಇತ್ತೀಚೆಗೆ ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಇನ್ನು ಕರ್ನಾಟಕದಲ್ಲಿ ಸಹ ಕಾಂಗ್ರೆಸ್ ಐಸಿಯುಗೆ ಹೋಗಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವರು ಐಸಿಯುನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು.

ಇದನ್ನೂ ಓದಿ:ಕಾಂಗ್ರೆಸ್‌ ಪಕ್ಷ ಐಸಿಯುನಲ್ಲಿದೆ.. ಜಗದೀಶ್​ ಶೆಟ್ಟರ್ ವ್ಯಂಗ್ಯ

ABOUT THE AUTHOR

...view details