ಕರ್ನಾಟಕ

karnataka

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ: ಚಿನ್ನಾಭರಣ ವಶ

By

Published : May 21, 2020, 4:16 PM IST

ವಿಜಯಪುರ ನಗರದ ಗಾಂಧಿ ಚೌಕ್ ಠಾಣೆ ಪೊಲೀಸರು ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳನನ್ನು ಬಂಧಿಸಿ ಆತನಿಂದ 108 ಗ್ರಾಂ ಚಿನ್ನ, 410 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 3,24,900 ರೂಪಾಯಿ ಮೌಲ್ಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

House theft arrest: Rs. 3,24,900 worth items siezed
ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ: 3,24,900 ರೂ. ಮೌಲ್ಯದ ವಸ್ತು ವಶ

ವಿಜಯಪುರ:ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳನನ್ನು ಬಂಧಿಸುವಲ್ಲಿ ನಗರದ ಗಾಂಧಿ ಚೌಕ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಇಂದು ಬೆಳಗಿನ ಜಾವ ಬಂಧಿತ ಆರೋಪಿ ರೋಹಿತ ರಾಮ ಕಾಯಗೊಂಡ(32) ನಗರದ ಸರಾಫ ಬಜಾರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಆತನನ್ನು ಬಂಧಿಸಿ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಆತ ಚಂದಾ ಬಾವಡಿಯ ವೆಂಕಟರಮಣ ಬಡಾವಣೆಯಲ್ಲಿ ಮನೆಗಳ್ಳತನ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ‌. ಆರೋಪಿ ರೋಹಿತ ರಾಮ ಕಾಯಗೊಂಡ ವೃತ್ತಿಯಲ್ಲಿ ಆಟೋ ಚಾಲಕನೆಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಯಿಂದ 108 ಗ್ರಾಂ ಚಿನ್ನ, 410 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು 3,24,900 ರೂಪಾಯಿ ಮೌಲ್ಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಡಿಎಸ್‌ಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಶರಣಗೌಡ ನೇತೃತ್ವದ ಪೊಲೀಸ್ ತಂಡ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್​ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಣೆ ಮಾಡಿದ್ದಾರೆ.

ABOUT THE AUTHOR

...view details