ಕರ್ನಾಟಕ

karnataka

ಗುಮ್ಮಟ ನಗರಿಯಲ್ಲಿ ಪಟಾಕಿ‌‌ ಸದ್ದೇನೋ ಇಲ್ಲ, ಪರಿಸರ ಸ್ನೇಹಿ ಗಣಪ ಕೇಳೋರಿಲ್ಲ!

By

Published : Aug 22, 2020, 5:49 PM IST

ಕೊರೊನಾ ಕರಿನೆರಳು ವಿಘ್ನ ನಿವಾರಕ ವಿನಾಯಕನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸದಂತೆ ಮಾಡಿದೆ. ಇದ್ರ ನಡುವೆ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಹೇರಿ ಗಣೇಶ ಹಬ್ಬದ ಸರಳ ಆಚರಣೆಗೆ ಅನುವು ಮಾಡಿಕೊಟ್ಟಿದೆ. ಜೊತೆಗೆ ಪರಿಸರ ಸ್ನೇಹಿ ಗಣಪನ ವಿಗ್ರಹ ಪ್ರತಿಷ್ಠಾಪಿಸುವಂತೆ ಸೂಚಿಸಿದೆ. ಹಾಗಾದ್ರೆ ಜಿಲ್ಲೆಯಲ್ಲಿ ಗಣೇಶ ಗಣೇಶ ಹಬ್ಬದ ವೇಳೆ ಸಾರ್ವಜನಿಕರು ಜಿಲ್ಲಾಡಳಿತದ ನಿಯಮಗಳನ್ನು ಪಾಲನೆ ಮಾಡಿದ್ರಾ? ಮನೆಗೆ ವಿಘ್ನ ನಿವಾರಕನನ್ನು ಹೇಗೆ ಬರ‌ಮಾಡಿಕೊಂಡ್ರು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದು ವರದಿ.

ganesh festival celebration in  vijaypur
ಪರಿಸರ ಸ್ನೇಹಿ ಗಣಪ ಕೊಳ್ಳೋರೆ ಇಲ್ಲ!

ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಕೊರೊನಾ ವೈರಸ್​​ಗೆ ಕೊಕ್ಕೆ ಹಾಕಲು ಜಿಲ್ಲಾಡಳಿತ ಸರ್ಕಾರದ ಕೋವಿಡ್​ ನಿಯಮಗಳನ್ನು ಪಾಲಿಸುವ ಮೂಲಕ ಹಬ್ಬ ಆಚರಿಸಲು ಸೂಚಿಸಿದೆ. ಆದ್ರೆ ನಗರಿಯಲ್ಲಿ ವಾದ್ಯ ಹಾಗೂ ಪಟಾಕಿ ಸದ್ದು ಕೇಳದಿದ್ರೂ ಬೇರೆ ನಿಯಮಗಳು ಮಾತ್ರ ಪಾಲನೆಯಾಗಿಲ್ಲ.

ಜನ್ರು ಹೆಚ್ಚಾಗಿ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿ ಮಾಡುವ ಮೂಲಕ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದಾರೆ. ನಗರ ಪಾಲಿಕೆಯ ಆದೇಶದನ್ವಯ ವ್ಯಾಪಾರಿಗಳು 200 ಮಣ್ಣಿನ ಗಣಪಗಳನ್ನು ಮಾರಾಟಕ್ಕೆ ತಂದ್ರೂ ಜನ ಅವುಗಳ ಖರೀದಿಗೆ ಮುಂದಾಗದಿರೋದು ಪರಿಸರ ಸ್ನೇಹಿ ಗಣಪ ವಿಗ್ರಹ ಮಾರಾಟಗಾರರನ್ನು ನಷ್ಟಕ್ಕೀಡು ಮಾಡಿದೆ.

ಪರಿಸರ ಸ್ನೇಹಿ ಗಣಪ ಕೊಳ್ಳೋರೇ ಇಲ್ಲ!

ಇತ್ತ ಮಾಸ್ಕ್, ದೈಹಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬ ನಿಯಮಗಳು ಜಾರಿಯಲ್ಲಿದ್ರೂ ವಿಜಯಪುರ ಎಲ್‌ಬಿಎಸ್ ಮಾರುಕಟ್ಟೆ, ಸಿದ್ದೇಶ್ವರ ಮಂದಿರ ರಸ್ತೆ ಜನ ಜಂಗುಳಿಯಿಂದ ತುಂಬಿದೆ. ನಗರದಲ್ಲಿ ಕಳೆದ ವರ್ಷದ ಸಂಭ್ರಮ ಜನತೆಯಲ್ಲಿ ಮನೆ ಮಾಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ,ಬೀದಿಗಳಲ್ಲಿ ಜನ ದಟ್ಟನೆಯಿಂದ ಕೂಡಿರೋದನ್ನು ಕಂಡು ಕೊರೊನಾ ಆತಂಕ ಬಿಗಡಾಯಿಸುವ ಹಂತಕ್ಕೆ ಹೋಗಬಹುದು ಎಂದು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ದೇವಾಲಯಗಳಿಗಲ್ಲಿ ಪೂಜೆ ಮಾಡುವಂತೆ ಸರ್ಕಾರ ಆದೇಶ ಮಾಡಿದ್ರೂ, ನಗರದ ಕೆಲವು ಬಡಾವಣೆಗಳಲ್ಲಿ ರಸ್ತೆಯ ಮೇಲೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ನಗರ ಪಾಲಿಕೆ ಮಣ್ಣಿನ ವಿಗ್ರಹ ಖರೀದಿಗೆ ಮಾತ್ರ ಅನುಮತಿ ನೀಡಿದ್ರೂ ಬಹುತೇಕ ಭಾಗದಲ್ಲಿ ಪಿಒಪಿ ಗಣಪ ಖರೀದಿ ಮಾಡುವುದರಿಂದ ಪರಿಸರಕ್ಕೆ ಹಾನಿಯುಂಟಾಗಲಿದೆ.

ABOUT THE AUTHOR

...view details