ಕರ್ನಾಟಕ

karnataka

ದೇಶದ್ರೋಹಿಗಳಿಗೆ ಕೇಂದ್ರದ ಅಗ್ನಿಪಥ್​ ಯೋಜನೆ ದಿಟ್ಟ ಉತ್ತರ: ಬಸನಗೌಡ ಪಾಟೀಲ ಯತ್ನಾಳ್​

By

Published : Jul 16, 2022, 5:54 PM IST

Updated : Jul 16, 2022, 6:11 PM IST

ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಹೋಗುವವರನ್ನು ತಡೆಯಲು ತಯಾರಾಗುವ ಪರಿಪಕ್ವವಾಗುವ ಕಾಲ ಈಗ ಬಂದಿದೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ​​

basangouda-patil-yatnal
ಬಸನಗೌಡ ಪಾಟೀಲ ಯತ್ನಾಳ್​

ವಿಜಯಪುರ: 2047ರಲ್ಲಿ ಭಾರತ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಷಡ್ಯಂತ್ರ ನಡೆದಿದೆ. ಹೀಗಾಗಿ ಭಾರತೀಯರು ಈಗ ಎಚ್ಚೆತ್ತುಕೊಳ್ಳಬೇಕಾಗಿದೆ. ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಹೋಗುವವರನ್ನು ತಡೆಯಲು ತಯಾರಾಗುವ ಪರಿಪಕ್ವವಾಗುವ ಕಾಲ ಈಗ ಬಂದಿದೆ. ದೇಶದ ಮಾಜಿ ಉಪರಾಷ್ಟ್ರಪತಿ ಪಾಕಿಸ್ತಾನದ ಏಜೆಂಟ್ ಆಗಿ ಕೆಲಸ‌ ಮಾಡಿದ್ದು ಸಾಬೀತಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಆರೋಪಿಸಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಿಷ್ಯದಲ್ಲಿ ಭಾರತವನ್ನು ಉಳಿಸಲು ಪ್ರಧಾನಿ ಮೋದಿ ಅವರು ಅಗ್ನಿಪಥ ಯೋಜನೆ ಜಾರಿ ಮಾಡಿದ್ದಾರೆ. ಅಗ್ನಿಪಥದಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸುವ ಸೇವೆಯಲ್ಲಿ ಉತ್ತಮ ಕೆಲಸ ಮಾಡಿದರೆ, ಅಲ್ಲಿಯೇ ಮುಂದುವರೆಯುತ್ತಾರೆ. ಇಲ್ಲ ವಾಪಸ್ ಬಂದವರಿಗೆ ಇಲ್ಲಿನ‌ ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸ್ಥಳೀಯ ಸಂಘ ಸಂಸ್ಥೆಗಳು ಸೆಕ್ಯೂರಿಟಿ ಕೆಲಸ ಕೊಡಲಿವೆ. ಅವರ ಅರ್ಹತೆ ಆಧಾರದ ಮೇಲೆ ಮಾಸಿಕ 20-25ಸಾವಿರ ರೂ. ಸಂಬಳ ಸಹ ಸಿಗುತ್ತದೆ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್​

ಇದನ್ನೂ ಓದಿ :ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ: ಮಾಜಿ ಸಚಿವ ಯುಟಿ ಖಾದರ್​

Last Updated :Jul 16, 2022, 6:11 PM IST

ABOUT THE AUTHOR

...view details