ಕರ್ನಾಟಕ

karnataka

ಅಡ್ವೈಸರಿ ಕಮಿಟಿಯಲ್ಲಿ ಚರ್ಚಿಸಿ ಅಧಿವೇಶನಕ್ಕೆ ದಿನ ನಿಗದಿ: ಸಭಾಧ್ಯಕ್ಷ ಕಾಗೇರಿ

By

Published : Sep 11, 2020, 1:59 PM IST

ನಗರದ ಹಲವೆಡೆ ಶಾಸಕರ ಅನುದಾನದಡಿ ಕಾಮಗಾರಿಗಳಿಗೆ ವಿಧಾಸಭೆ ಸ್ಪೀಕರ್​ ವಿಶ್ವೇಶ್ವರ್​ ಹೆಗಡೆ ಕಾಗೇರಿ ಚಾಲನೆ ನೀಡಿದರು. ಈ ವೇಳೆ ಮುಂಬರುವ ಅಧಿವೇಶನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

speaker-vishweshwara-hegade-kageri-speaks-on-monsoon-session
ಆಡ್ವೈಸರಿ ಕಮಿಟಿಯಲ್ಲಿ ಚರ್ಚಿಸಿ ಅಧಿವೇಶನಕ್ಕೆ ದಿನ ನಿಗದಿ: ಸಭಾಧ್ಯಕ್ಷ ಕಾಗೇರಿ

ಶಿರಸಿ (ಉ.ಕ): ವಿಧಾನಸಭೆ ಅಧಿವೇಶನ ನಡೆಯುವ ದಿನಗಳ ಕುರಿತಾಗಿ ಮೊದಲ ದಿನ ನಡೆಯುವ ಬ್ಯುಸಿನೆಸ್ ಅಡ್ವೈಸರಿ ಕಮಿಟಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಎನ್ನುವುದು ನಿಂತ ನೀರಲ್ಲ, ಜನರ ನಿರೀಕ್ಷೆಗಳು ಸಾಕಷ್ಟಿರುತ್ತವೆ. ಅದಕ್ಕೆ ಸ್ಪಂದಿಸುವ ಕೆಲಸ ನಡೆಯುತ್ತಿದೆ. ಅಲ್ಲದೇ ಕಳೆದ ಒಂದು ವರ್ಷದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಇನ್ನು ಮುಂದೆಯೂ ಜನರ ಬೇಡಿಕೆಗೆ ತಕ್ಕಂತೆ ಸ್ಪಂದಿಸಲಾಗುತ್ತದೆ ಎಂದರು.‌

ಅಧಿವೇಶನ ಕುರಿತು ಸಭಾಧ್ಯಕ್ಷ ಕಾಗೇರಿ ಪ್ರತಿಕ್ರಿಯೆ

ಇಲ್ಲಿನ ತಿಲಕ್ ನಗರದ ರಸ್ತೆ, ಅಯ್ಯಪ್ಪ ನಗರ ರಸ್ತೆ ದುರಸ್ತಿ, ಅಂಬಾಗಿರಿ 3ನೇ ಅಡ್ಡ ರಸ್ತೆ ಕಾಮಗಾರಿ ಹಾಗೂ ಮಾರಿಗುಡಿ ಹಿಂಭಾಗದ ರಸ್ತೆ ದುರಸ್ತಿ ಕೆಲಸಗಳಿಂದ ಸುಮಾರು 14.05 ಲಕ್ಷ ರೂ.ಗಳ ಕಾಮಗಾರಿಗೆ ಕಾಗೇರಿ ಚಾಲನೆ ನೀಡಿದರು.

ABOUT THE AUTHOR

...view details