ಕರ್ನಾಟಕ

karnataka

ಕಾರವಾರ: ಕಡ್ಲೆ ಕಡಲತೀರದಲ್ಲಿ ಮೂರಿಯಾ ಮೀನಿನ ಕಳೇಬರ ಪತ್ತೆ

By

Published : Oct 4, 2021, 12:48 PM IST

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮಾತ್ರ ಕಂಡುಬರುವ ಮೀನು ಇದಾಗಿದ್ದು, ದೇಹದ ಶೇ.25ರಷ್ಟು ಭಾಗ ಬಾಯಿ ಹೊಂದಿರುತ್ತದೆ. ಜೊತೆಗೆ ಹಲ್ಲುಗಳಿರುವುದರಿಂದ ಈ ಮೀನುಗಳ ದಾಳಿಗೆ ಸಿಕ್ಕರೆ ಗಂಭೀರ ಸ್ವರೂಪದ ಗಾಯ ಮಾಡುವ ಸಾಮರ್ಥ್ಯ ಇದೆ ಎಂಬುದು ಮೀನುಗಾರರ ಅಭಿಪ್ರಾಯ.

giant-fish-found-dead-in-shore-of-karwar-beach
ಕಾರವಾರ: ಕಡ್ಲೆ ಕಡಲತೀರದಲ್ಲಿ ಮೂರಿಯಾ ಮೀನಿನ ಕಳೇಬರ ಪತ್ತೆ

ಕಾರವಾರ (ಉ.ಕ): ಇಲ್ಲಿನ ಕಡ್ಲೆ ಕಡಲತೀರದಲ್ಲಿ ಅಪರೂಪದ ಮೂರಿಯಾ ಮೀನಿನ ಕಳೇಬರ ಪತ್ತೆಯಾಗಿದೆ. ಈ ಮೀನು ಸುಮಾರು 2 ಮೀಟರ್ ಉದ್ದದ 20 ಕೆ.ಜಿ ತೂಕವಿದೆ ಎಂದು ಅಂದಾಜಿಸಲಾಗಿದೆ.

ಗೋಬ್ರಿಯಾ ಮೀನು ಎಂದೂ ಕರೆಯಲ್ಪಡುವ ಇದು ಚಂಡಮಾರುತ ಅಪ್ಪಳಿಸಿದ ಪರಿಣಾಮ ದಡಕ್ಕೆ ಅಪ್ಪಳಿಸಿರಬಹುದು. ಅಥವಾ, ಸಮುದ್ರದಾಳದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ದಡಕ್ಕೆ ಬಂದು ಸತ್ತಿರಲೂಬಹುದು ಎಂಬ ಶಂಕೆ ಇದೆ.

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಮಾತ್ರ ಕಂಡುಬರುವ ಮೀನು ಇದಾಗಿದ್ದು, ದೇಹದ ಶೇ.25ರಷ್ಟು ಭಾಗ ಇದರ ಬಾಯಿ ಇರುತ್ತದೆ. ಜೊತೆಗೆ ಹಲ್ಲುಗಳಿರುವುದರಿಂದ ಈ ಮೀನುಗಳ ದಾಳಿಗೆ ಸಿಕ್ಕರೆ ಗಂಭೀರ ಸ್ವರೂಪದ ಗಾಯ ಮಾಡುವ ಸಾಮರ್ಥ್ಯ ಇದೆ ಎಂಬುದು ಮೀನುಗಾರರ ಅಭಿಪ್ರಾಯ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮೀನಿನ ಮಾಂಸಕ್ಕೆ ಬಹಳ ಬೇಡಿಕೆ ಇದ್ದು, ಸ್ಥಳೀಯ ಮಾರುಕಟ್ಟೆಯಲ್ಲಿಯೇ ಕೆ.ಜಿಗೆ ಸುಮಾರು 400ರಿಂದ 500 ರೂಪಾಯಿ ವರೆಗೂ ಮಾರಾಟವಾಗುತ್ತದೆ.

ಇದನ್ನೂ ಓದಿ:ನೋಡಿ: ಕಬ್ಬಿನ ಲಾರಿ ಅಡ್ಡಹಾಕಿ, ಮರಿಗೂ ಜಲ್ಲೆ ಕೀಳುವ ಕಲೆ ಕಲಿಸಿದ ಗಜರಾಜ

ABOUT THE AUTHOR

...view details