ಕರ್ನಾಟಕ

karnataka

ಉಡುಪಿ ಕೃಷ್ಣಮಠಕ್ಕೆ ಕನ್ನಡ ಫಲಕ ಅಳವಡಿಕೆ: ವಿವಾದಕ್ಕೆ ತೆರೆ

By

Published : Dec 3, 2020, 5:50 PM IST

ಕೆಲ ದಿನಗಳ ಹಿಂದೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ತುಳು ಮತ್ತು ಸಂಸ್ಕೃತದಲ್ಲಿ ಫಲಕ ಅಳವಡಿಸಲಾಗಿತ್ತು. ಕನ್ನಡದಲ್ಲಿ ಫಲಕ ಅಳವಡಿಸದ ಕಾರಣ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ದೇವಾಲಯದ ಮಹಾದ್ವಾರದಲ್ಲಿ ಕನ್ನಡ ಫಲಕ ಅಳವಡಿಕೆಯಾಗಿದ್ದು, ವಿವಾದಕ್ಕೆ ವಿರಾಮ ನೀಡಲಾಗಿದೆ.

Udupi krishna math
ಉಡುಪಿ ಶ್ರೀ ಕೃಷ್ಣ ಮಠ

ಉಡುಪಿ: ವಿವಾದದ ನಡುವೆ ಶ್ರೀಕೃಷ್ಣ ಮಠದಲ್ಲಿ ಕೊನೆಗೂ ಕನ್ನಡ ಫಲಕ ಅಳವಡಿಕೆಯಾಗಿದೆ.

ಕೆಲ ದಿನಗಳ ಹಿಂದೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ತುಳು ಮತ್ತು ಸಂಸ್ಕೃತದಲ್ಲಿ ಫಲಕ ಅಳವಡಿಸಲಾಗಿತ್ತು. ಕನ್ನಡದಲ್ಲಿ ಫಲಕ ಅಳವಡಿಸದೇ ಇದ್ದಿದ್ದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಕನ್ನಡ ಫಲಕದ ಬೋರ್ಡ್ ರಿಪೇರಿ ಆಗ್ತಿದೆ ಎಂದು ಕೃಷ್ಣ ಮಠದ ಪರ್ಯಾಯ ಶ್ರೀಗಳು ಸ್ಪಷ್ಟನೆ ನೀಡಿದ್ದರು.

ಓದಿ:ಕನ್ನಡ ಬೋರ್ಡ್ ಇನ್ನೂ ತಯಾರಾಗಿಲ್ವಂತೆ.. ಆದ್ಮೇಲೆ ತುಳು, ಸಂಸ್ಕೃತದ ಮೇಲೆ ಹಾಕ್ತಾರಂತೆ..

ಇದೀಗ ಮಠದ ಮುಂದಿನ ಮಹಾದ್ವಾರದಲ್ಲಿ ಕನ್ನಡ ಭಾಷೆಯಲ್ಲಿ ಫಲಕ ಅಳವಡಿಕೆಯಾಗಿದೆ. ಎತ್ತರದ ಗೋಪುರದಲ್ಲೇ ಕನ್ನಡ ಫಲಕ ಅಳವಡಿಸಿದ ಪರ್ಯಾಯ ಅದಮಾರು ಮಠ, ಗೋಪುರದ ಒಳಭಾಗದಲ್ಲಿ ಸಂಸ್ಕೃತ ಮತ್ತು ತುಳು ಬರಹದ ಫಲಕವನ್ನು ಅಳವಡಿಸಿ ವಿವಾದಕ್ಕೆ ತೆರೆ ಎಳೆದಿದೆ.

ABOUT THE AUTHOR

...view details