ಕರ್ನಾಟಕ

karnataka

ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ: ನಿಖಿಲ್ ಕುಮಾರಸ್ವಾಮಿ

By

Published : Nov 28, 2022, 7:33 PM IST

Updated : Nov 28, 2022, 8:11 PM IST

ಪಂಚರತ್ನ ಯಾತ್ರೆ ಬಹುತೇಕ ಯಶಸ್ಸು ಕಂಡಿದ್ದು, ಕೋಲಾರ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

pancharatna-yatra-has-been-successful-said-by-nikhil-kumaraswamy
ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ: ನಿಖಿಲ್ ಕುಮಾರಸ್ವಾಮಿ

ತುಮಕೂರು:ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿ ಗಲಭೆಗೆ ಪ್ರಚೋದಿಸುವ ಪಕ್ಷಗಳ ಬಗ್ಗೆ ಜನರಿಗೆ ತಿಳಿದಿದೆ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಮಾಡಿದ ಅಭಿವೃದ್ಧಿ ಜನಪರ ಕೆಲಸಗಳು ಇಂದಿಗೂ ಜನರ ಮನಸ್ಸಿನಲ್ಲಿದೆ. ಪಂಚರತ್ನ ಯಾತ್ರೆ ಬಹುತೇಕ ಯಶಸ್ಸು ಕಂಡಿದ್ದು, ಕೋಲಾರ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಪಂಚರತ್ನ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ: ನಿಖಿಲ್ ಕುಮಾರಸ್ವಾಮಿ

ನಗರದ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಪೇಟೆ ಬಾಯ್ಸ್ ಸಂಘದ ವತಿಯಿಂದ ಶ್ರೀ ವಿಜಯ ವಿನಾಯಕಸ್ವಾಮಿ ವಿಸರ್ಜನಾ ಮಹೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳಲ್ಲಿ ತುಮಕೂರು ಜಿಲ್ಲೆಗೆ ಬರಲಿರುವ ಪಂಚರತ್ನ ಯೋಜನೆ ರಥವನ್ನು ಭವ್ಯವಾಗಿ ಸ್ವಾಗತಿಸಿ ಮನೆ ಮನೆಗೆ ಅದರ ಮಹತ್ವವನ್ನು ತಿಳಿಸುವುದರ ಜೊತೆಗೆ ರಾಷ್ಟ್ರೀಯ ಪಕ್ಷಗಳ ದುರಾಡಳಿತದ ಬಗ್ಗೆ ತಿಳಿಸಿ. ಅಂತೆಯೇ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗರಾಜು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತಿಗಳಲ್ಲಿ ಹೈಟೆಕ್ ಆಸ್ಪತ್ರೆ ಮತ್ತು ಶಾಲೆಗಳ ನಿರ್ಮಾಣದ ಕನಸು ಕಂಡ ಕುಮಾರಣ್ಣ ಮಾತ್ರ ಜನಪರ ಯೋಜನೆ ಸಾಕಾರಗೊಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಪಂಚರತ್ನ ಯೋಜನೆಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಜನರಿಂದ ಸಕಾರಾತ್ಮಕ ಸ್ಪಂದನೆ ದೊರೆಕಿದೆ. 30 ಹಾಸಿಗೆ, ಮೂವರು ವೈದ್ಯರು ಇರುವ ಹೈಟೆಕ್ ಆಸ್ಪತ್ರೆ ಬಡವರ ಆರೋಗ್ಯ ಕಾಪಾಡಲಿದೆ. ಇದೇ ಪ್ರಾದೇಶಿಕ ಪಕ್ಷ ಕಂಡ ಉತ್ತಮ ಕನಸು. ಇದರ ಸಾಕಾರಕ್ಕೆ ಜೆಡಿಎಸ್ ಗೆ ಮತ ನೀಡುವುದರ ಮೂಲಕ ಅಧಿಕಾರ ನೀಡಿ ಎಂದು ಮನವಿ ಮಾಡಿದರು.

ಗ್ರಾಮೀಣ ಜನರಿಗೆ ಅತ್ಯಗತ್ಯ ಶಿಕ್ಷಣಕ್ಕೆ ಕುಮಾರಣ್ಣ ಅವರ ಪಂಚರತ್ನ ಯೋಜನೆ ಹೆಚ್ಚು ಮಹತ್ವ ನೀಡಲಿದೆ. ಆಧುನಿಕತೆಗೆ ತಕ್ಕಂತೆ ಗಣಕೀಕರಣ ಶಿಕ್ಷಣ ಪ್ರತಿ ಹಳ್ಳಿ ಮಕ್ಕಳಿಗೆ ದೊರೆಯಬೇಕು. ಖಾಸಗಿ ಶಾಲೆಗಳ ವ್ಯಾಮೋಹದ ಪೋಷಕರನ್ನು ಸರ್ಕಾರಿ ಶಾಲೆಯತ್ತ ಸೆಳೆಯುವ ಉಚಿತ ಶಿಕ್ಷಣ ಅದು ಹೈಟೆಕ್ ಶಾಲೆಯಲ್ಲಿ ಒದಗಿಸುವ ಭರವಸೆ ನೀಡಿದ್ದಾರೆ. ಈ ಜೊತೆಗೆ ರೈತರಿಗೆ ಅವಶ್ಯ ನೀರಾವರಿ ಯೋಜನೆಗಳ ಬಗ್ಗೆ, ವಿದ್ಯುತ್ ಮತ್ತು ನೀರು ನೀಡಿದರೆ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಚಿಂತಿಸಿದ್ದಾರೆ. ಈ ಸಮಯದಲ್ಲಿ ಕಾರ್ಯಕರ್ತರು ಮತದಾರರ ಮನದಲ್ಲಿ ನೆಲೆಸುವ ಅಂಶವನ್ನು ಮನದಟ್ಟು ಮಾಡಿ ಕುಮಾರಣ್ಣ ಮಾಡಿರುವ ಯೋಜನೆಗಳ ಬಗ್ಗೆ ತಿಳಿಸಿ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಖುರ್ಚಿ ಚಿಂತೆ : ಸಿಎಂ ಸ್ಥಾನ ಮುಂದಿನ ಬಾರಿಯೂ ನಮಗೇ.. ಸಚಿವ ಬಿ ಶ್ರೀರಾಮುಲು

Last Updated : Nov 28, 2022, 8:11 PM IST

ABOUT THE AUTHOR

...view details