ಕರ್ನಾಟಕ

karnataka

ರಾಜಕೀಯ ದ್ವೇಷ ಹಿನ್ನೆಲೆ; ಅಡಿಕೆ ಮರಗಳಿಗೆ ಬೆಂಕಿ ಹಚ್ಚಿದ ಆರೋಪ!

By

Published : Jan 2, 2021, 10:41 AM IST

ಗ್ರಾಮ ಪಂಚಾಯತ್​​ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋದ ಹಿನ್ನೆಲೆ ಅಡಿಕೆ ಮರಗಳನ್ನು ಕಳೆದುಕೊಳ್ಳುವಂತಾಗಿದೆ. ರಾಜಕೀಯ ದ್ವೇಷಕ್ಕೆ ಕಿಡಿಗೇಡಿಗಳು ಅಡಕೆ ಮರಗಳಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 5 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಮಾಯಣ್ಣಗೌಡ ಅಳಲು ತೋಡಿಕೊಂಡಿದ್ದಾರೆ.

fire on areca nut trees in tumkur
ರಾಜಕೀಯ ದ್ವೇಶ ಹಿನ್ನೆಲೆ; ಅಡಿಕೆ ಮರಗಳಿಗೆ ಬೆಂಕಿ ಹಚ್ಚಿದ ಆರೋಪ!

ತುಮಕೂರು: ರಾಜಕೀಯ ದ್ವೇಷದ ಹಿನ್ನೆಲೆ ಅಡಕೆ ಮರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ.

ಅಡಕೆ ಮರಗಳಿಗೆ ಬೆಂಕಿ ಹಚ್ಚಿದ ಆರೋಪ!

ಗುಬ್ಬಿ ತಾಲೂಕಿನ ಸಿ.ಎಸ್. ಪುರ ಹೋಬಳಿಯ ನೆಟ್ಟೆಕೆರೆ ಗೇಟ್ ಸಮೀಪದಲ್ಲಿದ್ದ ಮಾಯಣ್ಣ ಗೌಡ ಎಂಬುವರಿಗೆ ಸೇರಿದ ಅಡಕೆ ಗಿಡಗಳು ಬೆಂಕಿಗೆ ಆಹುತಿಯಾಗಿವೆ. ಜಮೀನಿನಲ್ಲಿ ಬೆಳೆಯುತ್ತಿದ್ದ ಅಡಕೆ ಮರ, ಹನಿ ನೀರಾವರಿ ಪೈಪ್​ಗಳು, ಪಂಪ್​​ ಮೋಟಾರ್ ಬೆಂಕಿಯಿಂದ ಹಾನಿಯಾಗಿದೆ.

ಈ ಸುದ್ದಿಯನ್ನೂ ಓದಿ:ಕೋಲಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸಾವು

ಗ್ರಾಮ ಪಂಚಾಯತ್​​ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋದ ಹಿನ್ನೆಲೆ ಅಡಕೆ ಮರಗಳನ್ನು ಕಳೆದುಕೊಳ್ಳುವಂತಾಗಿದೆ. ಈ ಕೃತ್ಯ ಎಸಗಿದವರು ಯಾರೆಂದು ಗೊತ್ತಿಲ್ಲ. ಆದ್ರೆ ರಾಜಕೀಯ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ಅಡಿಕೆ ಮರಗಳಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 5 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಮಾಯಣ್ಣಗೌಡ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details