ಕರ್ನಾಟಕ

karnataka

ಶಿವಮೊಗ್ಗದಲ್ಲಿ ದಳಪತಿ ಚಿತ್ರೀಕರಣ: ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ದರ್ಶನ ನೀಡಿದ ವಿಜಯ್

By

Published : Dec 12, 2019, 5:32 PM IST

ಕಳೆದೆರಡು ದಿನಗಳಿಂದ ತಮಿಳು ಚಿತ್ರರಂಗದ ಸೂಪರ್​ ಸ್ಟಾರ್​ ದಳಪತಿ ವಿಜಯ್​ ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡುಬಿಟ್ಟಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ದಳಪತಿ ವಿಜಯ್
Tamil Actor Vijay

ಶಿವಮೊಗ್ಗ:ಕಳೆದೆರಡು ದಿನಗಳಿಂದ ತಮಿಳು ಚಿತ್ರರಂಗದ ಸೂಪರ್​ ಸ್ಟಾರ್​ ದಳಪತಿ ವಿಜಯ್​ ತಮ್ಮ ಸಿನಿಮಾದ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ.

ಶಿವಮೊಗ್ಗದಲ್ಲಿ ದಳಪತಿ ಚಿತ್ರೀಕರಣ

ನಟ ವಿಜಯ್ ನಗರದ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದು, ನಗರದಲ್ಲಿರುವ ಹಳೆ ಜೈಲು ಆವರಣದಲ್ಲಿ 'ದಳಪತಿ 64' ಚಿತ್ರದ ಶೂಟಿಂಗ್ ಮೂರು ದಿನಗಳಿಂದ ಭರದಿಂದ ಸಾಗಿದೆ. ಸಿನಿಮಾದ ಪ್ರಮುಖ ದೃಶ್ಯದ ಚಿತ್ರೀಕರಣವನ್ನು ಜೈಲಿನಲ್ಲಿ ಮಾಡಲಾಗುತ್ತಿದ್ದು, ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್ ಕೂಡ ಹಾಕಲಾಗಿದೆ.

ನಟ ವಿಜಯ್ ನೋಡಲು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಒಂದು ಬಾರಿಯಾದರೂ ತಮ್ಮ ನೆಚ್ಚಿನ ನಾಯಕ ನಟನನ್ನು ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ವಿಜಯ್​​ ತಾವು ತಂಗಿದ್ದ ಹೋಟೆಲ್​ಗೆ ತೆರಳುವ ವೇಳೆ ದರ್ಶನ ನೀಡಿದ್ದಾರೆ. ಇದರಿಂದ ಅಭಿಮಾನಿಗಳು ಖುಷ್​ ಆಗಿದ್ದಾರೆ.

ABOUT THE AUTHOR

...view details