ಕರ್ನಾಟಕ

karnataka

ಸೂಕ್ತ ನಿರ್ವಹಣೆ ಇಲ್ಲದೆ ಮುಳುಗಿದ ಲಾಂಚ್.. ಪುನಃ ಸೇವೆ ಆರಂಭಿಸಲು ಸ್ಥಳೀಯರ ಆಗ್ರಹ

By

Published : Oct 1, 2022, 2:22 PM IST

launch drowned due to non maintenance
ಸೂಕ್ತ ನಿರ್ವಹಣೆ ಇಲ್ಲದೆ ಮುಳುಗಿದ ಲಾಂಚ್

ಸೂಕ್ತ ನಿರ್ವಹಣೆ ಇಲ್ಲದೆ ಶರಾವತಿ ಹಿನ್ನೀರಿನ ಶಿಗ್ಗಲು ಕರೂರು ನಡುವೆ ಸಂಪರ್ಕಗೊಂಡಿದ್ದ ಲಾಂಚ್ ನೀರಿನಲ್ಲಿ ಮುಳುಗಿದೆ. ಇದನ್ನು ಮೇಲೆತ್ತಿ, ಪುನಃ ಸೇವೆ ಆರಂಭಿಸುವ ಪ್ರಯತ್ನವಾಗಿಲ್ಲ. ಹಾಗಾಗಿ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಶಿವಮೊಗ್ಗ: ಸೂಕ್ತ ನಿರ್ವಹಣೆ ಇಲ್ಲದೇ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಮುಳುಗಿದೆ‌. ಇದರಿಂದ ಈ ಭಾಗದ ಜನ ಪರದಾಡುವಂತಾಗಿದೆ. ಜಿಲ್ಲೆಯ ಸಾಗರ ತಾಲೂಕಿನ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಅನುಕೂಲಕ್ಕೆ ಲಾಂಚ್ ಸೇವೆ ಆರಂಭ ಮಾಡಲಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಲಾಂಚ್ ನೀರಿನಲ್ಲಿ ಮುಳುಗಿದೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು. ನೀರು ಏರಿಕೆ ಆಗುತ್ತಿದ್ದಂತೆ ಲಾಂಚ್ ಮುಳುಗಡೆಯಾಗಿದೆ. ಲಾಂಚ್ ನೀರಿನಲ್ಲಿ‌ ಮುಳುಗಿದ ಪರಿಣಾಮ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಪುನಃ ಲಾಂಚ್ ಸೇವೆ ಆರಂಭಿಸಲು ಸ್ಥಳೀಯರ ಆಗ್ರಹ

ಶಿಗ್ಗಲು–ಕರೂರು ನಡುವೆ ಲಾಂಚ್ ಸೇವೆ ಆರಂಭಿಸುವಂತೆ ಜನರು ಬೇಡಿಕೆ ಇತ್ತು. ಹಾಗಾಗಿ ಒಳನಾಡು ಮತ್ತು ಜಲಸಾರಿಗೆ ಇಲಾಖೆಯ ಹಸಿರು ಮಕ್ಕಿಯ ಹಳೆ ಲಾಂಚ್ ಅನ್ನು, ಇಲ್ಲಿಗೆ ತರಿಸಲಾಗಿತ್ತು. ಶಾಸಕ ಹರತಾಳು ಹಾಲಪ್ಪ ಅವರು ಲಾಂಚ್ ಸೇವೆಗೆ ಚಾಲನೆ ನೀಡಿದ್ದರು. ಆದರೆ ಗ್ರಾಮ ಪಂಚಾಯಿತಿ ಅವರ ಸಮರ್ಪಕ ನಿರ್ವಹಣೆ ಇಲ್ಲದೆ ಲಾಂಚ್ ನೀರಿನಲ್ಲಿ ಮುಳುಗಿದೆ. ಇದರಿಂದ ನಾವು ಚನ್ನಗೊಂಡ ಗ್ರಾಮ ಪಂಚಾಯಿತಿಗೆ ಹೋಗಬೇಕಾದ್ರೆ 70 ಕಿ.ಮೀ ಸಾಗಬೇಕಾಗಿದೆ. ನಮಗೆ ಲಾಂಚ್ ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಶರಾವತಿ ಹಿನ್ನೀರಿನ ಲಾಂಚ್​ಗಳ ನಡುವೆ ಡಿಕ್ಕಿ: ತಪ್ಪಿತು ಭಾರಿ ಅನಾಹುತ

ABOUT THE AUTHOR

...view details