ಕರ್ನಾಟಕ

karnataka

ಬಿಜೆಪಿ ತನ್ನ ತಪ್ಪು ಮುಚ್ಚಿಕೊಳ್ಳಲು ದೇವಾಲಯ ರಕ್ಷಣಾ ವಿಧೇಯಕ ತರಲು ಹೊರಟಿದೆ: ಹೆಚ್​ಡಿಕೆ

By

Published : Sep 21, 2021, 3:55 PM IST

h-d-kumaraswamy-outrage-against-bjp-in-shivamogga

ಬಿಜೆಪಿಯವರು ಒಂದೆಡೆ ಹಿಂದುತ್ವದ ಹೆಸರು ಹೇಳುತ್ತಾರೆ. ಮತ್ತೊಂದೆಡೆ ಅವರದ್ದೇ ಸರ್ಕಾರ ದೇವಸ್ಥಾನ ಒಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಶಿವಮೊಗ್ಗ: ದೇವಾಲಯ ದ್ವಂಸ ಪ್ರಕರಣದಲ್ಲಿನ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಬಿಜೆಪಿ ದೇವಾಲಯದ ರಕ್ಷಣಾ ವಿಧೇಯಕ ತರಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹೇಳಿದ್ದಾರೆ.

ಜಿಲ್ಲೆಯ ಗೋಣಿಬೀಡಿನಲ್ಲಿ ಮಾಜಿ ಶಾಸಕ ದಿ.ಅಪ್ಪಾಜಿ ಗೌಡ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಬಿಜೆಪಿಯವರು ಒಂದೆಡೆ ಹಿಂದುತ್ವದ ಹೆಸರು ಹೇಳುತ್ತಾರೆ. ಮತ್ತೊಂದೆಡೆ ಅವರದ್ದೇ ಸರ್ಕಾರ ದೇವಸ್ಥಾನ ಒಡೆಯುತ್ತದೆ. ಅವರು ವಿಧೇಯಕ ತರಲು ಹೊರಟಿರುವ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದರು.

ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಇದೇ ತಿಂಗಳ 27ರಂದು ಜೆಡಿಎಸ್ ಬೆಂಗಳೂರಿನಲ್ಲಿ ಕಾರ್ಯಾಗಾರ ಮಾಡಲು ನಿರ್ಧರಿಸಿದೆ. ಅಂದೇ ಮೊದಲ ಹಂತವಾಗಿ ಮುಂಬರುವ ವಿಧಾನಸಭಾ ಕ್ಷೇತ್ರದ 140 ಜನರ ಹೆಸರು ಬಿಡುಗಡೆ ಮಾಡಲಾಗುವುದು. ಅಲ್ಲಿ ಎಲ್ಲಾ ವಿಚಾರವನ್ನು ಚರ್ಚೆ ಮಾಡುತ್ತೇವೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ದಿ.ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿ ಗೌಡ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು. ಇದನ್ನು‌ ಈಗಾಗಲೇ ಭದ್ರಾವತಿ ಕ್ಷೇತ್ರದ ಜನ ನಿರ್ಧಾರ ಮಾಡಿದ್ದಾರೆ ಎಂದರು. ಈ ವೇಳೆ ಶಾರದಾ ಅಪ್ಪಾಜಿಗೌಡ, ವೈ.ಎಸ್.ವಿ ದತ್ತಾ ಸೇರಿ ಇತರರಿದ್ದರು.

ಇದನ್ನೂ ಓದಿ:ವಿಧಾನಸಭೆ ಕಲಾಪ: ಮೈಸೂರು ಹಿಂದಿನ ಡಿಸಿ ವಿರುದ್ಧ ಸಾ.ರಾ.ಮಹೇಶ್‌ ರೋಷಾವೇಶ!

ABOUT THE AUTHOR

...view details