ಕರ್ನಾಟಕ

karnataka

'ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಬಿಜೆಪಿಯವರ ಮುಂದಿನ ಚುನಾವಣೆ ತಾಲೀಮು'

By

Published : Feb 14, 2022, 9:52 AM IST

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಬಿಜೆಪಿಯವರ ಮುಂದಿನ ಚುನಾವಣೆಗಳ ತಾಲೀಮು. ಬಡವರಿಗೆ, ಜನ ಸಾಮನ್ಯರಿಗೆ ಉತ್ತಮ ಯೋಜನೆ ಕೊಟ್ಟು ಆಡಳಿತ ನಡೆಸುವುದು ಬಿಜೆಪಿಯವರಿಗೆ ಗೊತ್ತಿಲ್ಲ. ಭಾವನೆಗಳು, ಧರ್ಮ, ಜಾತಿಗಳ ಮೂಲಕ ರಾಜಕೀಯ ಮಾಡುವುದು ಮಾತ್ರ ಅವರಿಗೆ ಗೊತ್ತು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್

ಶಿವಮೊಗ್ಗ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಬಿಜೆಪಿಯವರ ಮುಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ತಾಲೀಮು ಅಷ್ಟೇ, ಬೇರೇನೂ ಅಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ನಗರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ, ಜನಸಾಮಾನ್ಯರಿಗೆ ಉತ್ತಮ ಯೋಜನೆ ಕೊಟ್ಟು ಆಡಳಿತ ನಡೆಸುವುದು ಬಿಜೆಪಿಯವರಿಗೆ ಗೊತ್ತಿಲ್ಲ. ಭಾವನೆಗಳು, ಧರ್ಮ, ಜಾತಿಗಳ ಮೂಲಕ ರಾಜಕೀಯ ಮಾಡುವುದು ಮಾತ್ರ ಅವರಿಗೆ ಗೊತ್ತಿದೆ. ಸಿದ್ದಾಂತ, ಜಾತ್ಯಾತೀತತೆ ಮೇಲೆ ಕಾಂಗ್ರೆಸ್ ಆಡಳಿತ ನಡೆಸಿದರೆ ಬಿಜೆಪಿಯವರು ಧರ್ಮದ ಮೇಲೆ ಆಡಳಿತ ನಡೆಸುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್

ಅಸಮಾಧಾನ ಹೊರಹಾಕಿದ ಕಾರ್ಯಕರ್ತರು:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪಕ್ಷದ ಮಹಿಳಾ ಜಿಲ್ಲಾಧ್ಯಕ್ಷೆ ಸೇರಿದಂತೆ ಕೆಲವರು ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರು. ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುತ್ತಿಲ್ಲ. ಯಾವತ್ತೂ ಪಕ್ಷದ ಸಂಘಟನೆಗೆ ಬಾರದವರು ಪಕ್ಷದ ಮುಖಂಡರು ಬಂದಾಗ ವೇದಿಕೆ ಅಂಲಕರಿಸುತ್ತಾರೆ ಎಂದು ಅಪಾದಿಸಿದರು.

ABOUT THE AUTHOR

...view details