ಕರ್ನಾಟಕ

karnataka

ತೀರ್ಥಹಳ್ಳಿಯಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ದಂಪತಿ ನೇಣಿಗೆ ಶರಣು

By

Published : Jan 13, 2022, 7:56 PM IST

ತೀರ್ಥಹಳ್ಳಿಯಲ್ಲಿ ಅಡಿಕೆ ಚೇಣಿಗೆ(ಗುತ್ತಿಗೆ) ಸಾಲ ಮಾಡಿಕೊಂಡು ನಷ್ಟ ಹೊಂದಿದ ದಂಪತಿ ನೇಣಿಗೆ ಶರಣಾಗಿದ್ದಾರೆ.

couple-committed-suicide-in-thirthahalli
ತೀರ್ಥಹಳ್ಳಿಯಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತ ದಂಪತಿ ನೇಣಿಗೆ ಶರಣು

ಶಿವಮೊಗ್ಗ:ಅಡಿಕೆ ಚೇಣಿಗೆ ಸಾಲ ಮಾಡಿಕೊಂಡು ನಷ್ಟ ಉಂಟಾದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪೊರಲುಕೊಪ್ಪದಲ್ಲಿ ನಡೆದಿದೆ. ತಾಲೂಕಿನ ಸಂತೆಹಕ್ಲು ಸಮೀಪದ ಪೊರಲುಕೊಪ್ಪ ಗ್ರಾಮದ ಮಂಜುನಾಥ್ (46) ಹಾಗೂ ಉಷಾ (42) ನೇಣಿಗೆ ಶರಣಾದ ದಂಪತಿ.

ಮಂಜುನಾಥ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಎರಡು ಎಕರೆ ಜಮೀನು ಹೊಂದಿದ್ದು, ಅಡಿಕೆ ಚೇಣಿ ಮಾಡಲು ಸಾಲ ಮಾಡಿಕೊಂಡಿದ್ದರು. ಆದರೆ ಈ ಬಾರಿ ಫಸಲು ಕಡಿಮೆ ಬಂದು ನಷ್ಟ ಅನುಭವಿಸಿದ್ದರು.

ಹೀಗಾಗಿ ಸಾಲಗಾರರ ಕಾಟ ತಾಳಲಾರದೆ ಮನೆಯಲ್ಲೇ ನೇಣಿಗೆ‌ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:56ನೇ ಪ್ರಯತ್ನದಲ್ಲಿ 10th ಪಾಸ್​ ಮಾಡಿದ 77 ವರ್ಷದ ವೃದ್ಧ: ಇದೀಗ 12ನೇ ತರಗತಿ ಪರೀಕ್ಷೆ ಬರೆಯಲು ಸಿದ್ಧ!

ABOUT THE AUTHOR

...view details