56ನೇ ಪ್ರಯತ್ನದಲ್ಲಿ 10th ಪಾಸ್​ ಮಾಡಿದ 77 ವರ್ಷದ ವೃದ್ಧ: ಇದೀಗ 12ನೇ ತರಗತಿ ಪರೀಕ್ಷೆ ಬರೆಯಲು ಸಿದ್ಧ!

author img

By

Published : Jan 13, 2022, 5:59 PM IST

77 year old man enrols for class 12 exam

ತಮ್ಮ 77ನೇ ವಯಸ್ಸಿನಲ್ಲಿ 10ನೇ ತರಗತಿ ತೇರ್ಗಡೆ ಹೊಂದಿರುವ ವೃದ್ಧನೋರ್ವ ಇದೀಗ 12ನೇ ತರಗತಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಜೈಪುರ(ರಾಜಸ್ಥಾನ): ಓದುವ ಹಂಬಲ, ಕಲಿಯಬೇಕೆಂಬ ಆಸಕ್ತಿ, ಛಲವಿದ್ದರೆ ಸಾಕು ವಯಸ್ಸು ಅಡ್ಡಿಯಾಗಲ್ಲ. ಸಾಧಿಸುವ ಅದಮ್ಯ ಗುರಿ ಹೊಂದಿರುವ ಇಲ್ಲೊಬ್ಬರು ವೃದ್ಧ 55 ಪ್ರಯತ್ನಗಳ ಬಳಿಕ 10ನೇ ತರಗತಿ ಪಾಸ್​​ ಆಗಿದ್ದಾರೆ. ಇದೀಗ 12ನೇ ತರಗತಿ ಪರೀಕ್ಷೆಗಾಗಿ ಹೆಸರು ದಾಖಲಿಸಿದ್ದಾರೆ.

ಜಲೋರ್​ನ 77 ವರ್ಷದ ಹುಕ್ಕುಂದಾಸ್​​ ವೈಷ್ಣವ್ ನಿವೃತ್ತ ಸರ್ಕಾರಿ ನೌಕರ. ಇವರು 56ನೇ ಪ್ರಯತ್ನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದೀಗ 12ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಈ ವಯಸ್ಸಿನಲ್ಲೂ ಅಧ್ಯಯನ ಮುಂದುವರೆಸಿರುವ ಇವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

77 year old man enrols for class 12 exam

ಇದನ್ನೂ ಓದಿ: ಸಮಂತಾ ಜೊತೆಗಿನ ಡಿವೋರ್ಸ್​: ನಟ ನಾಗಚೈತನ್ಯ ಹೇಳಿದ್ದೇನು?

1945ರಲ್ಲಿ ಜಲೋರ್​​ನ ಸರ್ದಾರ್​ಗಢ್​ ಗ್ರಾಮದಲ್ಲಿ ಜನಿಸಿರುವ ಹುಕ್ಕುಂದಾಸ್​​, 1ರಿಂದ 8ನೇ ತರಗತಿಯವರೆಗೆ ಓದಿದ್ದಾರೆ. 1962ರಲ್ಲಿ ಮೊಕಲ್ಸರ್​​ನಲ್ಲಿ ಮೊದಲ ಸಲ 10ನೇ ತರಗತಿ ಪರೀಕ್ಷೆ ಬರೆದು, ಅನುತ್ತೀರ್ಣರಾಗಿದ್ದರು. ಈ ವೇಳೆ ಇವರ ಸ್ನೇಹಿತರು, 'ನೀನು 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್​ ಆಗುವುದಿಲ್ಲ' ಎಂದು ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿದ ಹುಕ್ಕುಂದಾಸ್, 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್​​ ಆಗುವುದಾಗಿ ಹೇಳಿದ್ದರು.

2010ರವರೆಗೆ 10ನೇ ತರಗತಿ ಪರೀಕ್ಷೆಗೆ 48 ಸಲ ಕುಳಿತುಕೊಂಡಿರುವ ಇವರು ಫೇಲ್​ ಆಗಿದ್ದರು. ಆದರೆ, 2019ರಲ್ಲಿ ಪರೀಕ್ಷೆ ಬರೆದು ದ್ವಿತೀಯ ದರ್ಜೆಯೊಂದಿಗೆ ಪಾಸ್​​ ಆಗಿದ್ದರು. ಇದರ ಬೆನ್ನಲ್ಲೇ 2021-22ರಲ್ಲಿ 12ನೇ ತರಗತಿಗೆ ದಾಖಲಾಗಿದ್ದು, ಇದೀಗ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

ವಿಶೇಷವೆಂದರೆ, ಇವರ ಮೊಮ್ಮಗ ಈಗಾಗಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಹುಕುಂದಾಸ್​ ವೈಷ್ಣವ್​​ 4ನೇ ತರಗತಿ ಪಾಸ್​ ಆಗಿದ್ದಕ್ಕಾಗಿ ನೀರಾವರಿ ಇಲಾಖೆಯಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದರು. 2005ರಲ್ಲಿ ನಿವೃತ್ತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.