ಕರ್ನಾಟಕ

karnataka

ಚಾಕು ಇರಿತಕ್ಕೊಳಗಾದ ಯುವಕನ ಆರೋಗ್ಯ ವಿಚಾರಿಸಿದ ಬಿ.ವೈ.ವಿಜಯೇಂದ್ರ

By

Published : Aug 16, 2022, 11:33 AM IST

ಶಿವಮೊಗ್ಗದಲ್ಲಿ ನಿನ್ನೆ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ್ದ ಬೆನ್ನಲ್ಲೇ, ಚೂರಿ ಇರಿತಕ್ಕೊಳಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ರಾಘವೇಂದ್ರ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

b-yvijayendra-enqiured-about-the-health-of-the-youth-stabbed
ಚಾಕು ಇರಿತಕ್ಕೊಳಗಾದ ಯುವಕನ ಆರೋಗ್ಯ ವಿಚಾರಿಸಿದ ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ನಿನ್ನೆ, ಮೊನ್ನೆಯೆಲ್ಲಾ ಬ್ಯಾಟ್ ಹಿಡಿದುಕೊಂಡು ಓಡಾಡುತ್ತಿದ್ದವರೆಲ್ಲ ಇಂದು ಚಾಕು, ಚೂರಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅಂತವರ ವಿರುದ್ದ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಚಾಕು ಇರಿತಕ್ಕೊಳಗಾದ ಯುವಕನ ಆರೋಗ್ಯ ವಿಚಾರಿಸಿದ ಬಿ.ವೈ.ವಿಜಯೇಂದ್ರ

ನಿನ್ನೆ ಚಾಕು ಇರಿತಕ್ಕೆ ಒಳಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಪ್ರೇಮ್​​​ ಸಿಂಗ್​ನನ್ನು ಬಿ.ವೈ ರಾಘವೇಂದ್ರ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಪ್ರೇಮ್ ಸಿಂಗ್​​​ಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಕ್ಕ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕೆಲವು ದಿನಗಳ ಕಾಲ ಚಿಕಿತ್ಸೆ ಅಗತ್ಯ ಇದೆ ಎಂದು ಹೇಳಿದರು.

ದೇವರು ದೊಡ್ಡವನು , ಚಾಕು ಇರಿತಕ್ಕೆ ಒಳಗಾಗಿದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರು ಏನ್ ಬೇಕಾದರೂ ಮಾಡಬಹುದು ಎನ್ನುವ ಮನಸ್ಥಿತಿ ಇದೆ. ನಿನ್ನೆ ಗೃಹ ಸಚಿವರು ಇಲ್ಲಿಗೆ ಭೇಟಿ‌ ನೀಡಿದ್ದಾರೆ. ಈ ರೀತಿ ದುಷ್ಕೃತ್ಯ ಎಸಗುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ .ಇನ್ನು ಈ ಘಟನೆಗಳ ಹಿಂದೆ ಯಾವ ಸಂಘಟನೆಗಳಿವೆ ಎಂಬುದನ್ನು ನಾನು ಪದೇ ಪದೇ ಹೇಳುವುದಿಲ್ಲ, ಇದು ಓಪನ್ ಸಿಕ್ರೇಟ್. ಇದು ಎಲ್ಲರಿಗೂ ತಿಳಿದಿರುವ ವಿಚಾರ ಎಂದರು.

ಇದಕ್ಕೂ ಮುನ್ನ ತಮ್ಮ ಸಹೋದರ ಸಂಸದ ಬಿ.ವೈ.ರಾಘವೇಂದ್ರ ರವರ ಹುಟ್ಟು ಹಬ್ಬದ ನಿಮಿತ್ತ ರವೀಂದ್ರ ನಗರದ ಗಣಪತಿ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ಇದನ್ನೂ ಓದಿ :ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ನಿರ್ಮಾಣಕ್ಕೆ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ABOUT THE AUTHOR

...view details