ಕರ್ನಾಟಕ

karnataka

ಲಾಂಗು - ಮಚ್ಚು ತೋರಿಸಿ ದರೋಡೆ ಯತ್ನ ಆರೋಪ.. ಮೂವರು ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

By

Published : Sep 8, 2021, 10:44 AM IST

Updated : Sep 8, 2021, 11:16 AM IST

ಮಚ್ಚು - ಲಾಂಗು ಹಿಡಿದು ಜನರನ್ನು ಬೆದರಿಸುತ್ತಿದ್ದ ನಾಲ್ವರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದರೆ, ಇನ್ನೊಬ್ಬ ಪರಾರಿಯಾಗಿದ್ದಾನೆ. ಯುವಕರು ಗಾಂಜಾ ಸೇವಿಸಿರಬಹುದು ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

.ನಾಲ್ವರು ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
.ನಾಲ್ವರು ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಶಿವಮೊಗ್ಗ:ಗಾಂಜಾ ಮತ್ತಿನಲ್ಲಿ ಲಾಂಗು ಮಚ್ಚು ತೋರಿಸಿ ಬೆದರಿಸುತ್ತಿದ್ದರೆಂಬ ಆರೋಪದಡಿ ಮೂವರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದು, ಓರ್ವ ಪರಾರಿಯಾಗಿರುವ ಘಟನೆ ರವೀಂದ್ರ ನಗರದ ಗಣಪತಿ ದೇವಾಲಯದ ಬಳಿ ನಡೆದಿದೆ.

ಗಾಂಜಾ ಮತ್ತಿನಲ್ಲಿ ಲಾಂಗು ಮಚ್ಚು ತೋರಿಸಿ ಬೆಳ್ಳಂ ಬೆಳಗ್ಗೆ ಜನರನ್ನು ಹೆದರಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಸಾರ್ವಜನಿಕರು ಮೂವರನ್ನು ಹಿಡಿದಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

ನಾಲ್ವರು ಯುವಕರ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ನಾಲ್ವರ ಗುಂಪೊಂದು ಗಾಂಜಾ ಮತ್ತಿನಲ್ಲಿ ಬೆಳ್ಳಂ ಬೆಳಗ್ಗೆ ಗಾಂಧಿನಗರ ಹಾಗೂ ರವೀಂದ್ರ ನಗರದ ಬಳಿ ಲಾಂಗು - ಮಚ್ಚು ತೋರಿಸಿ ಜನರನ್ನು ಹೆದರಿಸಿ ರಾಬರಿಗೆ ಯತ್ನಿಸುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಮೂವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಈ ವೇಳೆ, ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Sep 8, 2021, 11:16 AM IST

ABOUT THE AUTHOR

...view details