ಕರ್ನಾಟಕ

karnataka

ಸರಳ ದಸರಾ ಆಚರಣೆಯಿಂದ ಚನ್ನಪಟ್ಟಣ ಬೊಂಬೆ ಉದ್ದಿಮೆದಾರರು ಕಂಗಾಲು

By

Published : Oct 1, 2021, 5:33 PM IST

Updated : Oct 1, 2021, 10:37 PM IST

ಚನ್ನಪಟ್ಟಣ ಬೊಂಬೆ ಉದ್ದಿಮೆದಾರರು ಕಂಗಾಲು

ವಿಶಿಷ್ಠ ಶೈಲಿಯಲ್ಲಿರುವ ಚನ್ನಪಟ್ಟಣದ ಬೊಂಬೆಗಳು ನೋಡುಗರನ್ನು ಆಕರ್ಷಿಸುತ್ತವೆ. ಆದರೆ ಕಳೆದೊಂದು ವರ್ಷಗಳಿಂದ ಕೊರೊನಾ ಅಬ್ಬರಕ್ಕೆ ಎಲ್ಲಾ ಉದ್ಯಮಗಳೂ ನೆಲಕಚ್ಚಿವೆ. ಸಾಂಸ್ಕೃತಿಕ ನಗರಿ‌ ಮೈಸೂರು ದಸರಾ ಸಮಯದಲ್ಲಿ ಪ್ರತಿ‌ ಮನೆಗಳಲ್ಲೂ ಚನ್ನಪಟ್ಟಣ ಬೊಂಬೆಗಳದ್ದೇ ಕಾರುಬಾರು ಇರುತ್ತಿತ್ತು. ಆದರೆ ಈ ಬಾರಿಯ ಸರಳ ದಸರಾ ಬೊಂಬೆ ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿದೆ.

ರಾಮನಗರ: ಚನ್ನಪಟ್ಟಣ ಅಂದರೆ ಬೊಂಬೆನಾಡು ಎಂದೇ ಫೇಮಸ್​. ಇಲ್ಲಿಯ ಬೊಂಬೆಗಳು ದೇಶ-ವಿದೇಶಗಳಲ್ಲಿ‌‌ಯೂ ಪ್ರಖ್ಯಾತಿ ಗಳಿಸಿವೆ. ಅದರಲ್ಲೂ ಸಾಂಸ್ಕೃತಿಕ ನಗರಿ‌ ಮೈಸೂರು ದಸರಾ ಸಮಯದಲ್ಲಿ ಪ್ರತಿ‌ ಮನೆಗಳಲ್ಲೂ ಚನ್ನಪಟ್ಟಣ ಬೊಂಬೆಗಳದ್ದೇ ಕಾರುಬಾರು ಇರುತ್ತಿತ್ತು. ಆದರೆ ಈ ಬಾರಿಯ ಸರಳ ದಸರಾ ಬೊಂಬೆ ವ್ಯಾಪಾರಕ್ಕೆ ಪೆಟ್ಟು ಕೊಟ್ಟಿದೆ .

ಬೊಂಬೆಗಳು ನಯನ ಮನೋಹರ:

ತನ್ನದೇ ವಿಶಿಷ್ಠ ಶೈಲಿಯಲ್ಲಿ ಇಲ್ಲಿಯ ಬೊಂಬೆಗಳು ನೋಡುಗರನ್ನು ಸೆಳೆಯುತ್ತವೆ. ಆದರೆ ಕಳೆದ ಒಂದು ವರ್ಷಗಳಿಂದ ಕೊರೊನಾ ಅಬ್ಬರಕ್ಕೆ ಎಲ್ಲಾ ಉದ್ಯಮಗಳು ನೆಲಕಚ್ಚಿವೆ. ಚನ್ನಪಟ್ಟಣದ ಗೊಂಬೆಗಳ ಉದ್ಯಮದ ಮೇಲೂ ಕೋವಿಡ್​ ಕರಿನೆರಳು ಆವರಿಸಿದೆ.

ಚನ್ನಪಟ್ಟಣ ಬೊಂಬೆ ಉದ್ದಿಮೆದಾರರು ಕಂಗಾಲು

ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಆರಂಭಕ್ಕೆ ಎರಡು ತಿಂಗಳು ಇದ್ದಂತೆ ಇಲ್ಲಿನ ಗೊಂಬೆಗಳಿಗೆ ಸಾಕಷ್ಟು ಬೇಡಿಕೆ ಇರುತ್ತಿತ್ತು. ರಾಜಪರಂಪರೆ ಸಾರುವ ಆನೆ ಮೇಲಿನ ಅಂಬಾರಿ ಬೊಂಬೆಗಳು, ಜಂಬೂಸವಾರಿ ಬೊಂಬೆಗಳು, ಅರಮನೆ ಬೊಂಬೆಗಳನ್ನು ಜನ ಕೊಳ್ಳುತ್ತಿದ್ದರು. ಆದರೆ ಈ ಬಾರಿಯ ಸರಳ ದಸರಾದಿಂದಾಗಿ ಇಲ್ಲಿನ ಮಾರಾಟಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

'ದಸರಾ ಬಂದಾಗ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತೆ. ಬಂಧು-ಬಾಂಧವರು ಎಲ್ಲರೂ ಒಗ್ಗೂಡಿ ಹಬ್ಬವನ್ನು ಆಚರಿಸುವುದು ವಾಡಿಕೆ. ಅದರಂತೆ ಈ ಬಾರಿ ಕೂಡ ಮನೆಯಲ್ಲಿ ಬೊಂಬೆ ಕೂರಿಸುವ ಮೂಲಕ‌ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಯಲ್ಲಿ ಚನ್ನಪಟ್ಟಣದ ಬೊಂಬೆಗಳನ್ನು ತೆಗೆದುಕೊಂಡು ಹೋಗಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಆದರೆ ಕೊರಾನಾದಿಂದ ಈ‌ ಬಾರಿ ಸರಳ ದಸರಾದಲ್ಲಿ ನಮ್ಮ ನಾಡಿನ ಸಂಸ್ಕೃತಿ ಎತ್ತಿ ಹಿಡಿಯುವ ಬೊಂಬೆ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ' ಎಂದು ಬೊಂಬೆ ಉದ್ಯಮದಾರರು ಹೇಳಿದ್ದಾರೆ.

ಪ್ರಧಾನಿ ಮೋದಿ ಪ್ರೋತ್ಸಾಹ:

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ದೇಶೀಯ ಆಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಕರೆ ನೀಡಿದ್ದರು. ಅದರಲ್ಲೂ ಚನ್ನಪಟ್ಟಣ ಬೊಂಬೆಗಳಿಗೆ ಸ್ಥಳೀಯ ಮಟ್ಟದಲ್ಲಿ ಹೆಚ್ಚು ಪ್ರೋತ್ಸಾಹ ನೀಡಿದರೆ ಸಂಸ್ಕೃತಿಯ ಜೊತೆಗೆ ಉದ್ಯಮಕ್ಕೂ ಹೆಚ್ಚು ಪ್ರೋತ್ಸಾಹ ನೀಡುವಂತಾಗಿದೆ ಎಂದು ಹೇಳಿದ್ದರು.

Last Updated :Oct 1, 2021, 10:37 PM IST

ABOUT THE AUTHOR

...view details