ಕರ್ನಾಟಕ

karnataka

ಹೊಸ ಇತಿಹಾಸ ಸೃಷ್ಟಿಸಲಿದೆ ಗೌಡಗೆರೆ ಚಾಮುಂಡಿ: ಪ್ರತಿಮೆಗೆ ಸಿಗಲಿದೆ ಹೈಟೆಕ್ ಸ್ಪರ್ಶ

By

Published : Oct 11, 2021, 7:20 PM IST

gowdagere chamundi statue to get high tech touch

ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಜಗತ್‍ ಪ್ರಸಿದ್ಧಿಯಾಗಿರುವ ಚಾಮುಂಡೇಶ್ವರಿ ಪ್ರತಿಮೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದು, ದೇವಿಯ ವಿಗ್ರಹದ ಸುತ್ತ ಝರಿ ನಿರ್ಮಾಣ ಜೊತೆಗೆ ಮುಂಭಾಗದಲ್ಲಿ ಬೆಟ್ಟದ ಮಾದರಿ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ.

ರಾಮನಗರ:ಬೊಂಬೆನಗರಿ ಚನ್ನಪಟ್ಟಣದ ಗೌಡಗೆರೆ ಗ್ರಾಮದ ವಿಶ್ವ ವಿಖ್ಯಾತ ಚಾಮುಂಡೇಶ್ವರಿ ಪ್ರತಿಮೆ ಹೈಟೆಕ್ ಸ್ಪರ್ಶ ಸಿಗಲಿದೆ. ಚಾಮುಂಡೇಶ್ವರಿ ಅಮ್ಮನರ ಕ್ಷೇತ್ರದಲ್ಲಿ ಹೈಟೆಕ್ ವಿನ್ಯಾಸ ರೂಪಿಸುವ ನೀಲ ನಕ್ಷೆ ರೆಡಿಯಾಗಿದೆ.

ಗೌಡಗೆರೆ ಚಾಮುಂಡಿ ಪ್ರತಿಮೆಗೆ ಸಿಗಲಿದೆ ಹೈಟೆಕ್ ಸ್ಪರ್ಶ

ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಜಗತ್‍ ಪ್ರಸಿದ್ಧಿಯಾಗಿರುವ ಚಾಮುಂಡೇಶ್ವರಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರವನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಧರ್ಮದರ್ಶಿ ಡಾ. ಮಲ್ಲೇಶ್ ದೇಗುಲಕ್ಕೆ ಹೈಟೆಕ್ ಟಚ್ ನೀಡಲು ಮುಂದಾಗಿದ್ದಾರೆ. ಭಕ್ತರನ್ನು ಸೆಳೆಯಲು ವಿಗ್ರಹದ ಹೊರಾಂಗಣದಲ್ಲಿ ವಿಶೇಷ ವಿನ್ಯಾಸ ಮಾಡಿ ದೇವಿಯ ವಿಗ್ರಹದ ಸುತ್ತ ಝರಿ ನಿರ್ಮಾಣ ಜೊತೆಗೆ ಮುಂಭಾಗದಲ್ಲಿ ಬೆಟ್ಟದ ಮಾದರಿ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ.

ಗೌಡಗೆರೆ ಚಾಮುಂಡಿ ಪ್ರತಿಮೆಗೆ ಹೈಟೆಕ್ ಸ್ಪರ್ಶ:

ದೇವಿಯ ವಿಗ್ರಹದ ಸುತ್ತ ಝರಿ ನಿರ್ಮಾಣ ಮತ್ತು ಮುಂಭಾಗದಲ್ಲಿ ಬೆಟ್ಟದ ವಾತಾವರಣವನ್ನು ನಿರ್ಮಿಸಲು ವಿನ್ಯಾಸ ಮಾಡಲಾಗಿದೆ. ವಿಶ್ವದಲ್ಲೇ ಮೊದಲ ಹಾಗೂ ಎತ್ತರದ ವಿಗ್ರಹ ಪಂಚ ಲೋಹದ ಶಾಂತರೂಪಿ ಸಿಂಹವಾಹಿನಿ 18 ಭುಜಗಳ ಚಾಮುಂಡೇಶ್ವರಿ ದೇವಿಯನ್ನು ವಿಗ್ರಹ ನೋಡಲು ಪ್ರತಿನಿತ್ಯ ಜನಸಾಗರವೇ ಹರಿದುಬರುತ್ತಿದೆ. ಈ ನಿಟ್ಟಿನಲ್ಲಿ ಭಕ್ತರನ್ನು ಮತ್ತಷ್ಟು ಆಕರ್ಷಣೆ ಮಾಡಲು ಕ್ಷೇತ್ರದ 68 ಅಡಿ ಎತ್ತರದ ಶ್ರೀ ಚಾಮುಂಡೇಶ್ವರಿ ದೇವಿಯ ಹೊರಾಂಗಣವನ್ನು ವಿಶೇಷ ವಿನ್ಯಾಸ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ.

ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ:

ಅಮ್ಮನವರ ಲೋಹದ ಪ್ರತಿಮೆಯನ್ನು ಗೌಡಗೆರೆ ಗ್ರಾಮದಲ್ಲಿ ಇತ್ತೀಚಿಗೆ ಪ್ರತಿಷ್ಠಾಪನೆ ಮಾಡಲಾಗಿದೆ. ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹ ಮೂರ್ತಿ ಎಂಬ ಖ್ಯಾತಿಯನ್ನ ಸ್ಥಳ ಪಡೆದುಕೊಂಡಿದೆ. ಚಾಮುಂಡೇಶ್ವರಿ ಪ್ರತಿಮೆ ನೋಡಲು ಸಹಸ್ರಾರು ಭಕ್ತರು ಪ್ರತಿದಿನವೂ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗದಿಂದ ಹಾಗೂ ಹೊರ ರಾಜ್ಯಗಳಿಂದಲೂ ವೀಕ್ಷಣೆಗೆ ಬರುತ್ತಿದ್ದಾರೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಕುಂದುಕೊರತೆಗಳನ್ನು ನೋಡಿಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕ್ಷೇತ್ರದ ಧರ್ಮದರ್ಶಿಗಳು ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡುವ ಪುಣ್ಯಕ್ಷೇತ್ರ ಆಗಲಿದೆ ಎನ್ನುತ್ತಾರೆ ದೇಗುಲದ ಸಂಸ್ಥಾಪಕ ಮಲ್ಲೇಶ್.

ABOUT THE AUTHOR

...view details