ಕರ್ನಾಟಕ

karnataka

ಅಡವಿಖಾನಾಪುರದಲ್ಲಿ ಮತದಾನ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು

By

Published : May 9, 2023, 6:42 PM IST

ರಾಯಚೂರು ತಾಲೂಕಿನ ಅಡವಿಖಾನಾಪುರ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

Villagers are going to boycott voting
ಅಡವಿಖಾನಾಪುರದಲ್ಲಿ ಮತದಾನ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು

ಅಡವಿಖಾನಾಪುರದಲ್ಲಿ ಮತದಾನ ಬಹಿಷ್ಕರಿಸಲು ಮುಂದಾದ ಗ್ರಾಮಸ್ಥರು

ರಾಯಚೂರು:ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದರೆ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮವೊಂದರ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.

ರಾಯಚೂರು ತಾಲೂಕಿನ ಅಡವಿಖಾನಾಪುರ ಗ್ರಾಮದಲ್ಲಿ ಮತದಾನ ಬಹಿಷ್ಕರಲು ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಲಾಗಿದೆ. ಈ ಶೆಡ್ ಅನ್ನು ತೆರವು ಮಾಡುವಂತೆ ಊರಿನ ಜನರು ಒತ್ತಾಯಿಸಿದರು. ಹಲವು ಬಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಶಾಲೆ ಆವರಣದಲ್ಲಿ ಶೆಡ್‌ನ್ನು ತೆರವುಗೊಳಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರು, ಶಾಲೆಯ ಒಳಗಡೆ ಯಾರು ಪ್ರವೇಶಿಸ ಬಾರದೆಂದು ಕಾಂಪೌಂಡ್‌ಗೆ ಬೇಲಿ ಹಚ್ಚಿ ಮತದಾನ ಬಹಿಷ್ಕಾರಿಸಲು ಮುಂದಾಗಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಗ್ರಾಮಸ್ಥರ ಮನವೊಲಿಸಲು ಮುಂದಾದರು. ಬಳಿಕ ಸ್ಥಳಕ್ಕೆ ಬಂದ ಸಿಆರ್​ಪಿಎಫ್ ತುಕಡಿಯು ಶಾಲೆಯ ಪ್ರವೇಶ ಜಾಗದಲ್ಲಿ ಹಾಕಿದ್ದ ಬೇಲಿಯನ್ನು ತೆರವುಗೊಳಿಸಿದರು.

ಇದನ್ನೂ ಓದಿ:ಪ್ರಭಾಸ್​ ನಟನೆಯ 'ಆದಿಪುರುಷ್​' ಚಿತ್ರದ ಟ್ರೇಲರ್​ ಔಟ್​

ABOUT THE AUTHOR

...view details