ಕರ್ನಾಟಕ

karnataka

ರೌಡಕುಂದಾ ಮಠದ ಪೀಠಾಧಿಪತಿ ಮರಿಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಲಿಂಗೈಕ್ಯ

By

Published : Jul 24, 2020, 2:55 PM IST

ಸಿಂಧನೂರು ತಾಲೂಕಿನ ರೌಡಕುಂದಾ ಮಠದ ಪೀಠಾಧಿಪತಿ ಮರಿಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

Sivacharya Swamiji is no more
ಮರಿಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ

ರಾಯಚೂರು:ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಸಿಂಧನೂರು ತಾಲೂಕಿನ ರೌಡಕುಂದಾ ಮಠದ ಪೀಠಾಧಿಪತಿ ಮರಿಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಶ್ರೀಗಳು ಸುಮಾರು 24 ವರ್ಷಗಳಿಂದ ರೌಡಕುಂದಾ ಹಿರೇಮಠದ ಪೀಠಾಧಿಪತಿಯಾಗಿದ್ದರು. ಹಲವು, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಸಮಾಜದಲ್ಲಿ ಜಾಗೃತಿ ಮೂಡಿಸಿ, ಅಪಾರ ಭಕ್ತಗಣವನ್ನು ಹೊಂದಿದ್ದರು. ಇದೀಗ ಭಕ್ತ ಸಮೂಹವನ್ನು ಶ್ರೀಗಳು ಆಗಲಿದ್ದಾರೆ.

ABOUT THE AUTHOR

...view details