ಕರ್ನಾಟಕ

karnataka

ಕಾವೇರಿ ನೀರು ಪರಿಶೀಲನೆಗೆ ಕೇಂದ್ರದಿಂದ ತಜ್ಞರ ತಂಡ ಕಳುಹಿಸಲು ಜಲಸಂಪನ್ಮೂಲ ಸಚಿವರು ಭರವಸೆ: ಶೋಭಾ ಕರಂದ್ಲಾಜೆ

By ETV Bharat Karnataka Team

Published : Sep 26, 2023, 5:41 PM IST

Updated : Sep 26, 2023, 6:15 PM IST

ಕಾವೇರಿ ನದಿ ಮೈಸೂರು, ಬೆಂಗಳೂರು, ಮಂಡ್ಯ ಜನರಿಗೆ ಜೀವ ನದಿಯಾಗಿದೆ. ಈ ಕಾವೇರಿ ನೀರಿನ ವಿಚಾರದಲ್ಲಿ ನಮಗೆ ನಿರಂತರ ಅನ್ಯಾಯವಾಗುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದರೂ ಕಾವೇರಿ ನೀರಿನ ಹಳೆಯ ಮಾಪನ ಈಗಲೂ ಮುಂದುವರಿದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದರು.

Union Minister Shobha Karandlaje spoke to the media.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮವದರ ಜೊತೆ ಮಾತನಾಡಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮವದರ ಜೊತೆ ಮಾತನಾಡಿದರು.

ಮೈಸೂರು: ಕೇಂದ್ರದ ಜಲಸಂಪನ್ಮೂಲ ಸಚಿವರು ಕರ್ನಾಟಕ ಹಾಗೂ ತಮಿಳುನಾಡಿಗೆ ತಜ್ಞರ ತಂಡ ಕಳುಹಿಸಿ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು, ಬೆಂಗಳೂರು, ಮಂಡ್ಯ ಜನರಿಗೆ ಕಾವೇರಿ ಜೀವನದಿಯಾಗಿದೆ. ಈ ನದಿ ವಿಚಾರದಲ್ಲಿ ನಮಗೆ ನಿರಂತರ ಅನ್ಯಾಯವಾಗುತ್ತಿದೆ. ಬೇಸಾಯಕ್ಕೆ ಹಾಗೂ ಕುಡಿಯುವ ನೀರಿಗೆ ಎಷ್ಟು ನೀರು ಬೇಕೆಂದು ನಿರ್ಧಾರ ಆಗಬೇಕಿದೆ. ಆದರೆ ಹಳೆಯ ಮಾಪನ ಈಗಲೂ ಮುಂದುವರೆದಿದ್ದು, ಕುಡಿಯಲು ಪ್ರತಿವರ್ಷ 35 ಟಿಎಂಸಿ ನೀರು ಬೇಕು. ನಮಗೆ ಕನ್ನಂಬಾಡಿ ಹಾಗೂ ಕಬಿನಿಯಿಂದ 50 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ತಿಳಿಸಿದರು.

ಜನಸಂಖ್ಯೆ ಹೆಚ್ಚಾಗಿದ್ದರೂ ಹಳೆಯ ಮಾಪನ ಮುಂದುವರಿಕೆ: ಈಗಿರುವ ನೀರಿನಲ್ಲಿ ಬೇಸಾಯ ಹಾಗೂ ಕುಡಿಯುವ ನೀರಿಗೆ ಹಂಚಿಕೆ ಆಗಬೇಕು. ಆದರೆ ಇದು ಜನಸಂಖ್ಯೆ ಹೆಚ್ಚಾದರೂ ಹಳೆಯ ಮಾಪನ ಮಾತ್ರ ಬಳಸುತ್ತಿದ್ದೇವೆ. ಇದರ ಜೊತೆಗೆ ಕರ್ನಾಟಕ ಮೊನ್ನೆ ಕಾವೇರಿ ನದಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಸರಿಯಾದ ದಾಖಲೆ ಹಾಗೂ ವಾದವನ್ನು ಮಂಡಿಸಲಿಲ್ಲ. ನೀರು ಬಿಟ್ಟ ನಂತರ ಪರಿಸ್ಥಿತಿ ಕೈ ಮೀರಿದ ಮೇಲೆ ದೆಹಲಿಯಲ್ಲಿ ಬಂದು ಸಭೆ ಮಾಡಿದರು. ಆ ಸಂದರ್ಭದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿಯನ್ನು ವಿವರಿಸಿದರು. ಆಮೇಲೆ ಕೇಂದ್ರ ಸಚಿವರು ಕರ್ನಾಟಕ ಹಾಗೂ ತಮಿಳುನಾಡಿಗೆ ತಜ್ಞರ ತಂಡವನ್ನು ಕಳುಹಿಸಿ ಡ್ಯಾಮ್ ಗಳಲ್ಲಿ ಎಷ್ಟೆಷ್ಟು ನೀರಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

ರೈತ ಹೋರಾಟಕ್ಕೆ ಬೆಂಬಲ:ಕಾವೇರಿ ನೀರಿನ ವಿಚಾರದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಆಸ್ತಿ ಪಾಸ್ತಿಗೆ ಹಾನಿ ಮಾಡಿದರೆ ನಮಗೆ ನಷ್ಟ. ಅದರಿಂದ ಶಾಂತಿಯುತ ಪ್ರತಿಭಟನೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ತಮಿಳುನಾಡನ್ನು ಓಲೈಕೆ ಮಾಡುವುದರಲ್ಲಿ ಮುಂದಾಗಿದ್ದಾರೆ. ಇದರಿಂದ ನ್ಯಾಯಾಲಯಕ್ಕೆ ಸರಿಯಾದ ಅಂಕಿ ಅಂಶ ನೀಡಿಲ್ಲ. ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದ್ದಾರೆ. ನೀರನ್ನು ಬಿಟ್ಟು ಈಗ ಪ್ರಧಾನಿಯವರ ಮಧ್ಯಸ್ಥಿಕೆಗೆ ಮನವಿ ಮಾಡುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪಕ್ಷವೂ ಕರ್ನಾಟಕದ ಭಾಷೆ, ನೆಲ, ಜಲದ ವಿಷಯ ಬಂದಾಗ ಕೈ ಜೋಡಿಸಲು ಸಿದ್ಧರಿದ್ದೇವೆ. ಮೊನ್ನೆ ದೆಹಲಿಯ ಸಭೆಯಲ್ಲೂ ರಾಜ್ಯ ಸರ್ಕಾರಕ್ಕೆ ಸಹಕಾರ ಕೊಟ್ಟಿದ್ದೇವೆ. ಮುಂದೆ ನಮಗೆ ಎಷ್ಟು ಪ್ರಮಾಣದ ನೀರು ಬೇಕು ಎಂಬ ಬಗ್ಗೆ ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಬೇಕೆಂದು ಅವರು ಆಗ್ರಹಿಸಿದರು.

ಇದನ್ನೂ ಓದಿ:ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ.. 18 ದಿನ 3000 ಕ್ಯೂಸೆಕ್​ ನೀರು ಬಿಡಲು CWRC ಶಿಫಾರಸು

Last Updated : Sep 26, 2023, 6:15 PM IST

ABOUT THE AUTHOR

...view details