ಕರ್ನಾಟಕ

karnataka

ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾದ ತಂದೆ

By

Published : Jun 10, 2022, 2:19 PM IST

ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ಮನೆಗೆ ಹೋದಾಗ ಆತನ ಕುಟುಂಬಸ್ಥರು ಮಾಡಿದ ಅವಮಾನವನ್ನು ತಾಳಲಾರದೇ ಸಂತ್ರಸ್ತೆ ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Sexual harassment on girl in Mysore, Sexual harassment victim father suicide in Mysore, Mysore rape case, Mysore crime news, ಮೈಸೂರಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ, ಮೈಸೂರಿನಲ್ಲಿ ಲೈಂಗಿಕ ಕಿರುಕುಳದ ಸಂತ್ರಸ್ತೆ ತಂದೆ ಆತ್ಮಹತ್ಯೆ, ಮೈಸೂರು ಅತ್ಯಾಚಾರ ಪ್ರಕರಣ, ಮೈಸೂರು ಅಪರಾಧ ಸುದ್ದಿ,
ಮಗಳ ಮೇಲೆ ಲೈಂಗಿಕ ದೌರ್ಜನ್ಯ

ಮೈಸೂರು : ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಪ್ರಶ್ನಿಸಿದ ಆರೋಪಿ ಕುಟುಂಬ ಅವರ ಪೋಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮನನೊಂದ ಸಂತ್ರಸ್ತೆಯ ತಂದೆ ಅವಮಾನ ತಾಳಲಾರದೇ ಆತ್ಮಹೆತ್ಯೆಗೆ ಶರಣಾಗುವ ಘಟನೆ ಹುಣಸೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಪುತ್ರಿ ಒಬ್ಬರೇ ಓದಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ಸ್ವಾಮಿ ಗೌಡ ಅವರ ಮಗ ಶಿವರಾಜು ಮನೆಗೆ ಬಂದಿದ್ದಾನೆ. ಬಳಿಕ ಬಾಲಕಿಯ ಪೋಷಕರನ್ನು ನೋಡಿ ಓಡಿ ಹೋಗಿದ್ದಾನೆ. ಈ ವೇಳೆ, ಬಾಲಕಿ ನಡೆದ ಘಟನೆ ಬಗ್ಗೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.

ಓದಿ:ಬಾಲಕಿಯರ ಮೇಲೆ ಅತ್ಯಾಚಾರ ಆರೋಪ: ಬೈಕ್‌ಸಮೇತ ಇಬ್ಬರಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಚಾರದ ಬಗ್ಗೆ ಮಾತನಾಡಲು ನಾನು ಮತ್ತು ನನ್ನ ಪತಿ ಸ್ವಾಮಿಗೌಡರ ಮನೆಗೆ ತೆರಳಿದ್ದೇವೆ. ಸ್ವಾಮಿಗೌಡರ ಪತ್ನಿ ಶೈಲಜಾ ನಮ್ಮಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ಮತ್ತೊಮ್ಮೆ ನನ್ನ ಮನೆ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ನನ್ನ ಗಂಡ ನಮ್ಮ ಮನೆಯ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆ ತಾಯಿ ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಶಿವರಾಜು ವಿರುದ್ಧ ಪೋಕ್ಸೋ ಕಾಯ್ದೆಯಡಿ ಹಾಗೂ ಈತನ ತಂದೆ ಸ್ವಾಮಿ ಗೌಡ ಮತ್ತು ತಾಯಿ ಶೈಲಜಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details