ಕರ್ನಾಟಕ

karnataka

ಮೈಸೂರು ದಸರಾ.. ಸಾಂಪ್ರದಾಯಿಕ ಕುಸ್ತಿಗೆ ಚಾಲನೆ

By

Published : Sep 27, 2022, 7:45 AM IST

KN_MYS

ಮೈಸೂದು ದಸರಾ ಪ್ರಯುಕ್ತ 7 ದಿನಗಳ ಕಾಲ ನಡೆಯಲಿರುವ ನಾಡಕುಸ್ತಿಗೆ ಸಚಿವ ನಾರಾಯಣ ಗೌಡ ಚಾಲನೆ ನೀಡಿದರು.

ಮೈಸೂರು/ವಿಜಯಪುರ: ವಿಶ್ವವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ಸಾಂಪ್ರದಾಯಿಕ ನಾಡಕುಸ್ತಿಗೆ ಕ್ರೀಡಾ ಸಚಿವ ನಾರಾಯಣ ಗೌಡ ಚಾಲನೆ ನೀಡಿದರು.

ನಾಡಹಬ್ಬದಲ್ಲಿ, ನಾಡಕುಸ್ತಿಗೆ ತನ್ನದೇ ಆದ ಮಹತ್ವವಿದ್ದು ಇಂದಿಗೂ ಸಹಾ ಸಾಂಸ್ಕೃತಿಕ ನಗರಿಯಲ್ಲಿ ಕುಸ್ತಿ ಮನೆಗಳಿದ್ದು ಈ ಹಿನ್ನೆಲೆಯಲ್ಲಿ ದಸರಾ ಸಾಂಪ್ರದಾಯಿಕ ಕುಸ್ತಿಗೆ ಮಹತ್ವವಿದೆ. ದಸರಾ ಅಂಗವಾಗಿ ದೊಡ್ಡಕೆರೆ ಮೈದಾನದಲ್ಲಿರುವ ಕುಸ್ತಿ ಅಂಗಳದಲ್ಲಿ 7 ದಿನಗಳ ಕಾಲ ನಾಡಕುಸ್ತಿ ನಡೆಯಲಿದ್ದು, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಸರಾ ಕುಸ್ತಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಇದರಲ್ಲಿ ದಸರಾ ಕಿಶೋರ್, ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ್ ಹೆಸರಿನಲ್ಲಿ ಮಣ್ಣಿನ ಮೈದಾನದಲ್ಲಿ ಕುಸ್ತಿಪಟುಗಳು ಸೆಣಸಾಡಲಿದ್ದಾರೆ.

ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು, ಮೈಸೂರು ವಿಭಾಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಗರಡಿ ಮನೆಗಳಲ್ಲಿ ಕುಸ್ತಿಪಟುಗಳನ್ನು ತಯಾರು ಮಾಡಿ, ಪಂದ್ಯಾವಳಿಗಳಿಗೆ ಕಳುಹಿಸುತ್ತಿದ್ದಾರೆ. ನಮ್ಮ ಸರ್ಕಾರ ಕೂಡ ಕುಸ್ತಿಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗರಡಿ ಮನೆಗಳ ನಿರ್ಮಾಣಕ್ಕೆ ನಮ್ಮ ಕ್ರೀಡಾ ಇಲಾಖೆಯಿಂದ 10 ಲಕ್ಷ ರೂಪಾಯಿ ಅನುದಾನ ನೀಡುತ್ತಿದ್ದೇವೆ ಎಂದರು.

ದಸರಾ ನಾಡಕುಸ್ತಿ

ವಿಜಯಪೂರದಲ್ಲೂ ಅದ್ದೂರಿಯಾಗಿ ದಸರಾ ಆಚರಣೆ:ದಸರಾ ಎಂದಾಕ್ಷಣ ಮೈಸೂರು ಮಾತ್ರವೇ ನೆನಪಾಗಬಹುದು. ಆದರೇ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಅದರಷ್ಟೇ ಸಂಭ್ರಮದಿಂದ ದಸರಾ ನಡೆಯುತ್ತದೆ. ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದು ಈ ಭಾಗದಲ್ಲಿ ದಸರಾ ಪ್ರಸಿದ್ಧಿಯಾಗಿದೆ. ತಾಂಬಾ ಗ್ರಾಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಜನಪದ ಕಲಾ ತಂಡಗಳು ಮೆರವಣಿಗೆಯೊಂದಿಗೆ ಸಾವಿರಾರು ಜನರ ಕಣ್ಮನ ಸೆಳೆಯಿತು.

ತಾಂಬಾ ಗ್ರಾಮದ ಅಂಬಾಭವಾನಿ ಎಜು ಕೇಷನ್ ಟ್ರಸ್ಟ್‌ ಹಾಗೂ ಜಗದಂಬಾ ವಿದ್ಯಾ ವರ್ಧಕ ಸಂಘ ಹಾಗೂ ತಾಂಬಾದ ಸಾರ್ವ ಜನಿಕರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉತ್ಸವದಲ್ಲಿ ನಾಡಿನ ಕಲಾ ತಂಡಗಳು ಭಾಗವಹಿಸಿದ್ದವು. ಉತ್ಸವದ ಅಂಗವಾಗಿ ಗ್ರಾಮದಲ್ಲಿ ನಾಡದೇವಿ ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ದೇವಾನಂದ ಚೌಹಾಣ್ ಸೇರಿದಂತೆ ಸ್ವಾಮೀಜಿಗಳು, ಸಾವಿರಾರು ಸಂಖ್ಯೆಯ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಭಾಗಿಯಾಗಿದ್ದರು.

ಇದನ್ನೂ ಓದಿ:ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ ಪೂಜೆ

ABOUT THE AUTHOR

...view details